9 ರಂದು ತುಮುಲ್​ ಮತ ಎಣಿಕೆ

Tumul
Published on

ತುಮಕೂರು: ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲೆಯ ಪ್ರತಿಷ್ಠಿತ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಗಳ ಒಕ್ಕೂಟ(ತುಮುಲ್​)ದ ನಿರ್ದೇಶಕ ಮಂಡಳಿ ಚುನಾವಣಾ ಫಲಿತಾಂಶ ಗುರುವಾರ ಹೊರಬೀಳಲಿದೆ. ಕಳೆದ ನವೆಂಬರ್​ 10 ರಂದು ಚುನಾವಣೆ ನಡೆದಿದ್ದು 2 ತಿಂಗಳ ಬಳಿಕ ಹೈಕೋರ್ಟ್​ ಆದೇಶದಂತೆ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ತುಮುಲ್​ಗೆ 10 ತಾಲೂಕುಗಳಿಂದ ತಲಾ ಒರ್ವ ನಿರ್ದೇಶಕನಂತೆ 10 ಸ್ಥಾನಗಳಿಗೆ ನ.10ರಂದು ಚುನಾವಣೆ ನಡೆದಿದ್ದು ಒಟ್ಟು 21 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿತ್ತು. ಈ ಸಂದರ್ಭದಲ್ಲಿ ಹೈಕೋರ್ಟ್​ ಮೆಟ್ಟಿಲೇರಿದ್ದ 45 ಸಂಗಳು ಮತಹಕ್ಕು ಪಡೆದಿದ್ದವು. ಈ ಹಿನ್ನೆಲೆಯಲ್ಲಿ ಹೈಕೋರ್ಟ್​ ವಿಚಾರಣೆ ಪೂರ್ಣಗೊಂಡು ಅಂತಿಮ ತೀರ್ಪು ಪ್ರಕಟಗೊಳ್ಳುವವರೆಗೆ ಮತ ಎಣಿಕೆ ತಡೆಹಿಡಿಯಲಾಗಿತ್ತು.

ಮತ ಎಣಿಕೆ: ನವೆಂಬರ್​ನಲ್ಲಿ ನಡೆದ ಚುನಾವಣೆ ವೇಳೆ 1191 ಮತಗಳ ಪೈಕಿ 1188 ಮತ ಚಲಾವಣೆಯಾಗಿದ್ದವು. ತುಮಕೂರು ತಾಲೂಕಿನಲ್ಲಿ ಎರಡು, ಗುಬ್ಬಿ 1 ಮತ ಚಲಾವಣೆಯಾಗಿರಲಿಲ್ಲ. ಉಳಿದಂತೆ ಎಲ್ಲಾ ತಾಲೂಕುಗಳಲ್ಲಿಯೂ ಶೇ.100ರಷ್ಟು ಮತದಾನ ದಾಖಲಾಗಿತ್ತು. ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದ್ದು ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ತಾಲೂಕು ಕಚೇರಿಯಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಬೆಳಗ್ಗೆ 8.30ರಿಂದ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ಭಾರತಿ, ಕೊಂಡವಾಡಿಗೆ ಅಗ್ನಿಪರೀಕ್ಷೆ

ಕೆಎಸ್ಸಾರ್​ಟಿಸಿ ಅಧ್ಯಕ್ಷ, ಗುಬ್ಬಿ ಶಾಸಕ ಎಸ್​.ಆರ್​.ಶ್ರೀನಿವಾಸ್​ ಪತ್ನಿ ಕೆ.ಪಿ.ಭಾರತಿದೇವಿ ಭವಿಷ್ಯ ಗುರುವಾರ ನಿರ್ಧಾರವಾಗಲಿದೆ. ತುಮುಲ್​ ಚುನಾವಣೆಯಲ್ಲಿ ಸ್ಪರ್ಧಿಸಿರುವ ಭಾರತಿದೇವಿ ಈ ಮೂಲಕ ರಾಜಕೀಯ ಜೀವನಕ್ಕೆ ಹಿಂಬಾಗಿಲ ಪ್ರವೇಶಕ್ಕೆ ಪಡೆಯುವ ತವಕದಲ್ಲಿದ್ದು ಸಹಜವಾಗಿ ತುಮುಲ್​ ಲಿತಾಂಶ ಕುತೂಹಲ ಕೆರಳಿಸಿದೆ. ತುಮಕೂರು ತಾಲೂಕು ಎಚ್​.ಕೆ.ರೇಣುಕಾಪ್ರಸಾದ್​ ಎಚ್​.ಎ.ನಂಜೇಗೌಡ, ಗುಬ್ಬಿ ತಾಲೂಕು ಜಿ.ಚಂದ್ರಶೇಖರ್​, ಕೆ.ಪಿ.ಭಾರತಿದೇವಿ, ಚಿಕ್ಕನಾಯಕನಹಳ್ಳಿ ತಾಲೂಕು ಎಸ್​.ರಾಜಶೇಖರ್​, ಬಿ.ಎನ್​.ಶಿವಪ್ರಕಾಶ್​, ತಿಪಟೂರು ತಾಲೂಕು

ತ್ರಿಯಂಬಕ, ಎಂ.ಕೆ.ಪ್ರಕಾಶ್​, ತುರುವೇಕೆರೆ ತಾಲೂಕು ಪಿ.ಟಿ.ಗಂಗಾಧರಯ್ಯ, ಸಿ.ವಿ.ಮಹಲಿಂಗಯ್ಯ, ಕುಣಿಗಲ್​ ತಾಲೂಕು ಡಿ.ಕೃಷ್ಣಕುಮಾರ್​, ಕೆ.ಎಂ.ಮಾಸ್ತಿಕರೀಗೌಡ, ಮಧುಗಿರಿ ತಾಲೂಕು ಕೊಂಡವಾಡಿಚಂದ್ರಶೇಖರ್​, ಬಿ.ನಾಗೇಶಬಾಬು, ಶಿರಾ ತಾಲೂಕು ಎಸ್​.ಆರ್​.ಗೌಡ, ಸಿ.ಆರ್​.ಉಮೇಶ್​, ಪಾವಗಡ ತಾಲೂಕು ಚನ್ನಮಲ್ಲಪ್ಪ, ಚಂದ್ರಶೇಖರರೆಡ್ಡಿ ನೇರಹಣಾಹಣಿ ಏರ್ಪಟ್ಟಿತ್ತು. ಕೊರಟಗೆರೆ ತಾಲೂಕಿನಿಂದ ವಿ.ಸಿದ್ದಗಂಗಯ್ಯ, ಈಶ್ವರಯ್ಯ ಹಾಗೂ ಟಿ.ಎನ್​.ಅರುಣ್​ ಕುಮಾರ್​ ತ್ರಿಕೋನ ಸ್ಪರ್ಧೆಯಿತ್ತು.

ಅಭ್ಯರ್ಥಿ ಅಥವಾ ಏಜೆಂಟ್​ಗೆ ಅನುಮತಿ

ತಹಸೀಲ್ದಾರ್​ ಕಚೇರಿ ನ್ಯಾಯಾಲಯದ ಆವರಣದಲ್ಲಿ ಮತ ಎಣಿಕೆ ನಡೆಯಲಿದ್ದು 4 ಟೇಬಲ್​ಗಳನ್ನು ಅಳವಡಿಸಲಾಗಿದೆ. ಒಂದು ಸುತ್ತಿಗೆ ತಲಾ 4 ತಾಲೂಕುಗಳ ಮತ ಎಣಿಕೆ ಮಾಡಲಾಗುವುದು. ಬೆಳಗ್ಗೆ 8.30ಕ್ಕೆ ಮತ ಎಣಿಕೆ ನಡೆಯಲಿದ್ದು ಅಭ್ಯರ್ಥಿ ಅಥವ ಅವರ ಪರವಾಗಿ ಒಬ್ಬ ಏಜೆಂಟ್​ಗೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಮತ ಎಣಿಕೆ ಕೇಂದ್ರದ ಬಳಿ ಬರಲು ರ್ನಿಬಂಧ ಹೇರಲಾಗಿದೆ. ಪೊಲೀಸ್​ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಯು ಆದ ಎಸಿ ಗೌರವ ಕುಮಾರ್​ ಶೆಟ್ಟಿ "ವಿಜಯವಾಣಿ'ಗೆ ತಿಳಿಸಿದರು.

=======

ಮತದಾನಕ್ಕೆ ಪ್ರತ್ಯೇಕ ಅವಕಾಶ

ಮತದಾನಕ್ಕೆ ಅವಕಾಶ ಸಿಗದೆ ಅನರ್ಹಗೊಂಡಿದ್ದ 8 ತಾಲೂಕುಗಳ 45 ಹಾಲು ಉತ್ಪಾದಕರ ಸಹಕಾರ ಸಂಘಗಳು ಹೈಕೋರ್ಟ್​ ಮೆಟ್ಟಿಲೇರಿ ಮತದಾನಕ್ಕೆ ಅವಕಾಶ ಪಡೆದುಕೊಂಡಿದ್ದು ಈ ಸಂಗಳ ಡೆಲಿಗೇಟ್​ಗಳಿಗೆ ಮತದಾನ ಮಾಡಲು ಹೈಕೋರ್ಟ್​ ಆದೇಶದಂತೆ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಲಾಗಿತ್ತು. ಪ್ರತ್ಯೇಕ ಮತಗಟ್ಟೆಗಳಲ್ಲಿ ಹೈಕೋರ್ಟ್​ ಮೆಟ್ಟಿಲೇರಿದ್ದ 45 ಮತದಾರರು ಹಕ್ಕುಚಲಾಯಿಸಿದ್ದು ಮತ ಎಣಿಕೆಯಲ್ಲಿ ಈ ಮತಗಳನ್ನು ಸಹ ಪರಿಗಣಿಸುವಂತೆ ಹೈಕೋರ್ಟ್​ ಆದೇಶದಲ್ಲಿ ತಿಳಿಸಿದೆ.

=======

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net