

ತುಮಕೂರು: ಜಿಲ್ಲಾ ಪೊಲೀಸ್ ಕಾರ್ಯವೈಖರಿಗೆ ಕೆಂಡಾಮAಡಲರಾಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜಿಲ್ಲಾಡಳಿತಕ್ಕೆ ಛಾಟಿ ಬೀಸಿರುವ ಬೆನ್ನಹಿಂದೆಯೇ ಮೂವರು ಕಾನ್ಸ್ಟೇಬಲ್‌ಗಳ ತಲೆದಂಡವಾಗಿದೆ.
ಕರ್ತವ್ಯಲೋಪದ ಆರೋಪದ ಮೇಲೆ ಕ್ಯಾತಸಂದ್ರ ಠಾಣೆಯ ಹೆಡ್ ಕಾನ್ಸಟೇಬಲï ಶಿವಣ್ಣ, ಕಾನ್ಸಟೇಬಲï ಸಂತೋಷ್ ಹಾಗೂ ಮಹಿಳಾ ಠಾಣೆ ಕಾನ್ಸಟೇಬಲï ಕುಸುಮಾ ಎಂಬುವವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಆದೇಶಿಸಿದ್ದಾರೆ.
ಎರಡು ದಿನದ ಹಿಂದೆಯಷ್ಟೇ ತುಮಕೂರು ನಗರದಲ್ಲಿ ಆಟೋ ಚಾಲಕನೊಬ್ಬ ಅಪ್ರಾಪ್ತ ವಯಸ್ಸಿನ ಅನಾಥ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾಗ, ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು ಪೊಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿತ್ತು.
ಸಾರ್ವಜನಿಕರು ಗುಂಪುಕಟ್ಟಿಕೊAಡು ಆರೋಪಿಯಿಂದ ಬಾಲಕಿಯನ್ನು ರಕ್ಷಿಸಿದರೂ ಕ್ಯಾತಸಂದ್ರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ, ಹಿರಿಯ ಅಧಿಕಾರಿಗಳಿಗೂ ಠಾಣೆಯಿಂದ ಮಾಹಿತಿ ನೀಡಿರಲಿಲ್ಲ ಎಂಬ ಕರ್ತವ್ಯಲೋಪದ ಮೇಲೆ ಕಾನ್ಸ್ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದೆ.