

ತುಮಕೂರು: ಹದಿನಾರನೇ ವಿಧಾನಸಭೆ ರಚನೆಯಾಗಿ 100 ದಿನ ಪೂರ್ಣವಾಗಿದ್ದು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕಾರ್ಯಕ್ರಮಗಳಿಗೆ ಸೀಮಿತವಾಗಿದೆ, ಇದರ ಪರಿಣಾಮ ಭವಿಷ್ಯದಲ್ಲಿ ಗೊತ್ತಾಗಲಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.
ನಗರದ ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ವಿಶೇಷ ಸಂವಾದದಲ್ಲಿ ಮಾತನಾಡಿದ ಅವರು, ತುಮಕೂರು ಅಭಿವೃದ್ಧಿಯ ಬಗ್ಗೆ ಹೊಂದಿರುವ ಕನಸುಗಳನ್ನು ಓದುಗರ ಮುಂದೆ ಬಿಚ್ಚಿಟ್ಟರು.
ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರವಿದ್ದರೂ ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕು, ಅನ್ನ, ವಸತಿ, ಶಿP್ಷÀಣ, ಆರೋಗ್ಯ ಕ್ಷೇತ್ರದಲ್ಲಿ ನೆರವು ನೀಡುವ ನಿಟ್ಟಿನಲ್ಲಿ ಕ್ರಮವಹಿಸಬೇಕಿತ್ತು. ಆದರೆ, ಈಗಿನ ಸರ್ಕಾರದಲ್ಲಿ ಹಣದ ಕೊರತೆ ಅಭಿವೃದ್ಧಿಗೆ ತೊಡಕಾಗಿದೆ ಎಂದರು.
ಕೇAದ್ರ ಸರ್ಕಾರ ಶಿP್ಷÀಣ ಹಾಗೂ ಆರೋಗ್ಯಕ್ಕೆ ಒತ್ತು ನೀಡಿದೆ, ಶಿP್ಷÀಣದ ಗುಣಮಟ್ಟದ ಬಗ್ಗೆ ಚಿಂತಿಸಬೇಕಾದ ಸಮಯದಲ್ಲಿ ಇನ್ನೂ ಕಟ್ಟಣ, ಮೈದಾನ ಎಂದು ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡುತ್ತಿz್ದೆÃವೆ ಎಂದರು.
ಗ್ಯಾರAಟಿ ಕಾರ್ಯಕ್ರಮಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟರೆ ಹೊಣೆ ಯಾರು? ಎ¯್ಲÁ ಶಾಸಕರೂ ಅಭಿವೃದ್ಧಿಗೆ ಹಣ ಸಿಕ್ಕಿಲ್ಲ ಎಂದು ಬೇಸರದಲ್ಲಿz್ದÁರೆ. ಕಾಂಗ್ರೆಸ್ ಶಾಸಕರಿಗೂ ಹಣ ಕೊಡಲಾಗದ ಸ್ಥಿತಿಯಲ್ಲಿ ಸರ್ಕಾರವಿದೆ.
ತುಮಕೂರು ನಗರದಲ್ಲಿ ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಸಾಕಷ್ಟು ಮಾದರಿ ಕೆಲಸಗಳಾಗಿವೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಬೆಳೆಯುತ್ತಿರುವ ನಗರದಲ್ಲಿ ಇನ್ನೂ ಸಾಕಷ್ಟು ಕಾರ್ಯಕ್ರಮಗಳು ಬಾಕಿಯಿದ್ದು ಅನುದಾನದ ನಿರೀಕ್ಷೆಯಲ್ಲಿz್ದÉÃವೆ ಎಂದರು.
ನಗರದ ಕೆಲವು ವಾರ್ಡ್ಗಳಲ್ಲಿ ಮಾತ್ರ ಕೇಂದ್ರದ ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಅಭಿವೃದ್ಧಿ ಮಾಡಿ ತೋರಿಸಿz್ದÉÃವೆ, ಅದನ್ನು ಹೊರವಲಯದ ವಾರ್ಡ್ಗಳಲ್ಲಿಯೂ ಮಾಡುವ ಕನಸಿದೆ. ಮುಂದಿನ ದಿನಗಳಲ್ಲಿ ಹೋರಾಟ ಮಾಡಿಯಾದರೂ ಅನುದಾನ ತಂದು ಅಭಿವೃದ್ಧಿ ಮಾಡಬೇಕು ಎಂದರು.
ಹೈಟೆಕ್ ಗ್ರಂಥಾಲಯ ಎನ್ನಿಸಿಕೊಂಡಿರುವ ನಗರದ ಕೇಂದ್ರ ಗ್ರಂಥಾಲಯದಲ್ಲಿ ತುಮಕೂರು ವಿವಿ ಹಾಗೂ ಐಟಿ, ಬಿಟಿ ಇಲಾಖೆ ಸಹಯೋಗದಲ್ಲಿ ಇನ್‌ಕ್ಯೂಬಿಕ್ ಸೆಂಟರ್ ಆಗಿ ಪರಿವರ್ತಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ಸಿಗುವಂತೆ ಮಾಡಲು ಈ ಸೆಂಟರ್ ಉಪಯೋಗವಾಗಬೇಕಿದೆ.
ನಗರದ ಸಮಗ್ರ ಅಭಿವೃದ್ಧಿಗೆ ನನ್ನೊಂದಿಗೆ ನಾಗರೀಕರ ಸಹಕಾರ ಕೂಡ ಅತ್ಯಗತ್ಯವಾಗಿದೆ, ಸಚಿವರು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಲ್ಲಿಯೂ ನಿರಂತರವಾಗಿ ಸಂಪರ್ಕದಲ್ಲಿದ್ದು ನಗರದ ಅಭಿವೃದ್ಧಿ ಒತ್ತು ನೀಡಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
`ಡ್ರಗ್' ದಂಧೆ ತುಮಕೂರು ನಗರದಲ್ಲಿನ ದೊಡ್ಡ ಸಮಸ್ಯೆಯಾಗಿದೆ, ಪೊಲೀಸರು ನಿರ್ಧಾಕ್ಷಿಣ್ಯವಾಗಿ ಕ್ರಮಕೈಗೊಳ್ಳದಿದ್ದರೆ ಮುಂದಿನ ಪೀಳಿಗೆಯ ಮಕ್ಕಳು ಕೈಗೆ ಸಿಗುವುದಿಲ್ಲ ಎಂಬ ಆತಂಕ ಕಾಡಲಾರಂಭಿಸಿದೆ ಎಂದು ಜಿ.ಬಿ.ಜ್ಯೋತಿಗಣೇಶ್ ಕಳವಳ ವ್ಯಕ್ತಪಡಿಸಿದರು.
ತುಮಕೂರು ನಗರದಲ್ಲಿ ಯುವಜನರು ಅಪಾಯದಲ್ಲಿದ್ದಾರೆ, ಎಲ್ಲೆಡೆಯೂ ಚಾಕೋಲೆಟ್ ಸಿಕ್ಕಂತೆ ಮಾದಕ ವಸ್ತುಗಳು ಸಿಗುತ್ತಿರುವುದು ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ, ಈ ದಂಧೆಯನ್ನು ಮಟ್ಟಹಾಕುವಲ್ಲಿ ಪೊಲೀಸರ ಶ್ರಮ ಸಾಲದು ಎಂದರು.
ನಗರದೆಲ್ಲೆಡೆ ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಸೇರಿದಂತೆ ವಿವಿಧ ಮಾಧಕ ವಸ್ತುಗಳಿಗೆ ದಾಸರಾಗುತ್ತಿರುವುದು ಆತಂಕ ಹೆಚ್ಚಿಸಿದೆ, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳೂ ಈ ಅನಿಷ್ಟಕ್ಕೆ ಸಿಲುಕಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ವಿಶೇಷ ಅಭಿಯಾನ ನಡೆಸಿ ದಂಧೆಯನ್ನು ಮಟ್ಟಹಾಕಬೇಕಿದೆ ಎಂದರು.
ತುಮಕೂರು ನಗರದಲ್ಲಿ ಕುಡಿಯುವ ನೀರಿಗೆ ಪ್ರಸ್ತುತ ಹೆಬ್ಬಾಕ, ಬುಗುಡನಹಳ್ಳಿ ಕೆರೆಯನ್ನು ಆಶ್ರಯಿಸಿz್ದÉÃವೆ, ಗಂಗಸAದ್ರ ಹಾಗೂ ಮರಳೂರು ಕೆರೆಯಿಂದ ತುಮಕೂರಿನ ದಕ್ಷಿಣ ಭಾಗಕ್ಕೆ ನೀರು ನೀಡಲು ಸಾಧ್ಯವಿದೆ, ಇದಕ್ಕೆ ಪೂರಕವಾಗಿ ಶುಧೀಕರಣ ಘಟಕ ಸ್ಥಾಪಿಸಬೇಕಿದೆ, ನೀರು ನೀಡಲು ಅನುದಾನದ ಅಗತ್ಯವಿದೆ.
ಪ್ರಸ್ತುತ ವಿದ್ಯಾನಗರ, ಬುಗುಡನಹಳ್ಳಿ ಹಾಗೂ ಶ್ರೀದೇವಿ ಕಾಲೇಜು ಹಿಂಭಾಗ ಸೇರಿ ಮೂರು ನೀರು ಶುದ್ಧೀಕರಣ ಘಟಕ ಇದ್ದು ಇದರ ಜತೆಗೆ ದಕ್ಷಿಣ ತುಮಕೂರಿನಲ್ಲಿ ಮತ್ತೊಂದು ಘಟಕ ಆರಂಭಿಸುವ ಚಿಂತನೆಯಿದೆ ಎಂದರು.
ಶುದ್ಧೀಕರಣ ಘಟಕಗಳಿಂದ ನೀರು ಸಂಗ್ರಹಿಸಲು ನಗರದ 35 ವಾರ್ಡ್ಗಳಲ್ಲಿ ಇನ್ನೂ 44 ಹೊಸ ಒವರ್‌ಹೆಡ್ ಟ್ಯಾಂಕ್‌ಗಳ ಅಗತ್ಯವಿದೆ. ಸಧ್ಯಕ್ಕಾದರೂ 15 ಟ್ಯಾಂಕ್ ತುರ್ತಾಗಿ ಬೇಕಿದ್ದು ಇದಕ್ಕಾಗಿ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು.
ಕಳೆದ ಮೂರು ವರ್ಷದಲ್ಲಿ ಸುರಿದ ಸತತ ಮಳೆ ತುಮಕೂರು ನಗರದಲ್ಲಿ ಮಳೆ ನೀರಿನಿಂದ ಆಗಬಹುದಾದ ಅತಾಹುತಗಳನ್ನು ದರ್ಶನ ಮಾಡಿಸಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ರಾಜಗಾಲುವೆಗಳನ್ನು ಗುರುತಿಸಿ, ಅಭಿವೃದ್ಧಿ ಪಡಿಸುವುದೇ ಆಗಿದೆ ಆದರೆ, ಇದು ನಮಗೆ ಸವಾಲಾಗಿದೆ.
ರಾಜಗಾಲುವೆ ನಿರ್ವಹಣೆಗೆ ರಾಜ್ಯ ಸರ್ಕಾರದಿಂದಲೇ ಪ್ರತ್ಯೇಕ ಅನುದಾನ ಮೀಸಲಿಡಬೇಕು ಈ ಬಗ್ಗೆ ವಿಧಾನಸಭೆ ಅಧಿವೇಶದಲ್ಲಿಯೂ ಧ್ವನಿ ಎತ್ತಿz್ದÉÃನೆ, ಮಳೆ ಬಂದರೆ ಏನು ಸಮಸ್ಯೆಯಾಗಲಿದೆ ಎಂಬ ಸ್ಪಷ್ಟ ಅರಿವು ಮೂಡಿಸಿದೆ. ಅಮೃತ 2 ಅನುದಾನದಲ್ಲಿ ಕೆಲವು ಕಡೆಗಳಲ್ಲಿ ಅಭಿವೃದ್ಧಿ ಮಾಡಿದ್ದರಿಂದ ಅಮಾನಿಕೆರೆಗೆ ನೀರು ಸರಾಗವಾಗಿ ಹರಿದಿದೆ.
ನಗರದಲ್ಲಿನ ಬಹುತೇಕ ಎಲ್ಲಾ ಮುಖ್ಯರಸ್ತೆಗಳಿಗೆ ಲಭ್ಯವಾದ ಅನುದಾನದಲ್ಲಿ ಕಾಯಕಲ್ಪ ನೀಡಲಾಗಿದೆ. ಬಡಾವಣೆಗಳಲ್ಲಿಯೂ ವಸತಿ ಪ್ರದೇಶದ ರಸ್ತೆಗಳನ್ನು ಹಂತಹAತವಾಗಿ ಆದ್ಯತೆಯ ಮೇಲೆ ಸುಧಾರಿಸಲಾಗುವುದು.
ವ್ಯವಸ್ಥಿತವಾಗಿ ನಗರ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಮಂಡಿಪೇಟೆ, ಲಕ್ಕಪ್ಪ ವೃತ್ತ ಸೇರಿ ಹಲವು ಕಡೆಗಳಲ್ಲಿ ಸುವ್ಯವಸ್ಥಿತ ರಸ್ತೆ ನಿರ್ಮಾಣ ನಮಗೆ ಸವಾಲಾಗಿದೆ. ಹಿಂದಿನ ಎಡವಟ್ಟುಗಳು ಅಭಿವೃದ್ಧಿಗೆ ಅಡ್ಡಿಯಾಗಿದೆ, ತಗ್ಗು ಪ್ರದೇಶದಲ್ಲಿನ ರಸ್ತೆಗಳಲ್ಲಿ ನೀರು ನಿಲ್ಲುತ್ತಿದ್ದು ಗುಂಡಿಗಳು ಬೀಳುತ್ತಿವೆ. ಈ ನೀರನ್ನು ಬೇರೆಕಡೆ ಹರಿಸಲು ದಾರಿಯೇ ಇಲ್ಲ. ಇಂತಹ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಪಾಲಿಕೆಯ ಆರ್ಥಿಕ ಇತಿಮಿತಿಯಲ್ಲಿ ಎಲ್ಲಾ ರಸ್ತೆಗಳಲ್ಲಿಯೂ ಗುಂಡಿ ಮುಚ್ಚಲು ಸಾಧ್ಯವಾಗಿಲ್ಲ. ಸಮಸ್ಯೆಗಳಿದ್ದರೆ ಸಾಧ್ಯವಾದಷ್ಟು ಮಟ್ಟಿಗೆ ಪರಿಹರಿಸಲಾಗುವುದು. ರಸ್ತೆಯ ಗುಂಡಿಗಳನ್ನು ಮುಚ್ಚಲು ನಾನು ನಿರ್ದೇಶನ ನೀಡುತ್ತೇನೆ.
ಮಂಡಿಪೇಟೆ ರಸ್ತೆ ಸದಾ ಕುಸಿಯುತ್ತಿರುತ್ತದೆ, ವ್ಯಾಪಾರಿಗಳಿಗೂ ತೊಂದರೆಯಾಗದAತೆ ಮಾಡಬೇಕಿದೆ, ಸ್ಥಳೀಯರ ಸಹಕಾರ ಬೇಕು. ಭೂ ಸ್ವಾಧೀನ ಸವಾಲಾಗಿದೆ ಎಂದರು.
ನಗರದಲ್ಲಿ ಸವಾಲಾಗಿದ್ದ ಯುಜಿಡಿ ಸಮಸ್ಯೆಗೆ ಸಾಧ್ಯವಾದಷ್ಟು ಮಟ್ಟಿಗೆ ಪರಿಹಾರ ಒದಗಿಸಲಾಗಿದೆ. ಯುಜಿಡಿ 2ನೇ ಹಂತದ ಕಾಮಗಾರಿ ಕೂಡ ಬಹುತೇಕ ಪೂರ್ಣಗೊಂಡಿದೆ.
ಭೂಸ್ವಾಧೀನ ಪ್ರಕ್ರಿಯೆ ಕಷ್ಟವಾಗಿರುವ ಹಿನ್ನೆಲೆಯಲ್ಲಿ ಕ್ಯಾತಸಂದ್ರದ ಶಿಂಷಾ ನದಿಯ ರಾಜಗಾಲುವೆಯಲ್ಲಿ ಯುಜಿಡಿ ಪೈಪ್‌ಲೈನ್ ತೆಗೆದುಕೊಂಡು ಬರಲಾಗಿದೆ. ಮರಳೂರು ಕೆರೆಗೆ ಕೊಳಚೆ ಬರದಂತೆ ತಡೆದು ಗಂಗಸAದ್ರದ ಮೂಲಕ ಭೀಮಸಂದ್ರ ಕೊಳಚೆನೀರು ಶುದ್ಧೀಕರಣ ಘಟಕಕ್ಕೆ ಬಿಡಲಾಗಿದೆ.
ನಗರ ವಿಸ್ತಾರವಾಗಿ ಬೆಳೆಯುತ್ತಿದ್ದು ಹೊರವಲಯಗಳಲ್ಲಿಯೂ ಯುಜಿಡಿ, ವಿದ್ಯುತ್, ರಸ್ತೆ ಸೇರಿದಂತೆ ಮೂಲಸೌಕರ್ಯದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ನಗರದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಿದೆ. ಭೂಮಿಯೊಳಗೆ ವಿದ್ಯುತ್ ಲೈನ್ ತೆಗೆದುಕೊಂಡು ಬಂದರೆ ನಗರವಾಸಿಗಳಿಗೆ ಮಳೆ ಬಂದಾಗ ಆಗುವ ವಿದ್ಯುತ್ ಸಮಸ್ಯೆಗೆ ಶಾಶ್ವರ ಪರಿಹಾರ ಸಿಗಲಿದೆ. ಇಂತಹ ಸಾಕಷ್ಟು ಯೋಜನೆಗಳಿಗೆ ಹೆಚ್ಚು ಅನುದಾನದ ಅಗತ್ಯವಿದ್ದು ಸರ್ಕಾರದಿಂದ ನಾವು ನಿರೀಕ್ಷೆ ಇಟ್ಟುಕೊಂಡಿz್ದÉÃವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನಕ್ಕಾಗಿ ನಿರಂತರ ಪ್ರಯತ್ನ ಮುಂದುವರಿಯಲಿದೆ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯಾಗಿದೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪರ್ಯಾಯ ಎನ್ನಿಸುವಂತೆ ನಗರದ ಏಳು ಕಡೆಗಳಲ್ಲಿ `ನಮ್ಮ ಕ್ಲಿನಿಕ್' ಆರಂಭಿಸಲಾಗಿದ್ದು ಜನರಿಗೆ ಪ್ರಾಥಮಿಕ ಚಿಕಿತ್ಸೆ ಲಭ್ಯವಾಗುತ್ತಿದೆ.
ವೈದ್ಯರು, ಸಿಬ್ಬಂದಿ, ಸೌಕರ್ಯಕ್ಕಾಗಿ ಒಂದು ಕ್ಲಿನಿಕ್‌ಗೆ ಮಾಸಿಕ 1.50ಲP್ಷÀ ರೂ. ಖರ್ಚು ಮಾಡಲಾಗುತ್ತಿದೆ. ಸ್ಮಾರ್ಟ್ಸಿಟಿ ಯೋಜನೆ, ಸಿಎಸ್‌ಆರ್ ಫಂಡ್ ಸೇರಿದಂತೆ ವಿವಿಧ ಯೋಜನೆಗಳನ್ನು ಬಳಸಿಕೊಂಡು ಜಿಲ್ಲಾಸ್ಪತ್ರೆಯನ್ನು ಹಂತಹAತವಾಗಿ ಮೇಲ್ದರ್ಜೆಗೇರಿಸಲಾಗಿದೆ. ಆರೋಗ್ಯ, ಶಿಕ್ಷಣ, ಮೂಲಸೌಕರ್ಯಕ್ಕೆ ವಿಶೇಷ ಆದ್ಯತೆ ಇz್ದÉÃಇರುತ್ತದೆ.
ಕಳೆದೆರಡು ದಶಕಗಳಿಂದ ತುಮಕೂರು ನಗರದಲ್ಲಿ ಬಡವರಿಗೆ ನಿವೇಶನ ನೀಡಲು ಸಾಧ್ಯವಾಗಿಲ್ಲ. ಭವಿಷ್ಯದಲ್ಲಿಯೂ ಭೂಮಿ ಸಿಗುವುದು ಅನುಮಾನವಾಗಿದೆ.
ಕೆಲವು ವರ್ಷಗಳ ಹಿಂದೆ ರಾಜೀವ್‌ಗಾಂಧಿ ನಗರದಲ್ಲಿ ನಿವೇಶನ, ದಿಬ್ಬೂರಿನಲ್ಲಿ ಮನೆ ನೀಡಿz್ದÉÃವೆ, 800 ಮನೆ ನೀಡಿz್ದÉÃವೆ, ಪೌರಕಾರ್ಮಿಕರಿಗೆ ಆದ್ಯತೆಯ ಮೇಲೆ ಮನೆ ನೀಡುತ್ತೇವೆ, ಹಂದಿಜೋಗ ಸಮುದಾಯ ನಿವೇಶನ ಕೇಳುತ್ತಿದೆ. ಬೆಳಗುಂಬ-ವಡ್ಡರಹಳ್ಳಿ ಭಾಗದಲ್ಲಿ ಜಾಗ ಗುರುತಿಸಲಾಗಿದೆ ಬಡಾವಣೆ ಮಾಡಬಹುದು.
ಎಲ್ಲಿಯಾದರೂ ಅವಕಾಶ ಮಾಡಿಕೊಂಡು ಪೌರಕಾರ್ಮಿಕ ಕುಟುಂಬಗಳಿಗೆ ನಿವೇಶನ, ಮನೆ ನಿರ್ಮಿಸಿಕೊಡಬೇಕಿದೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆ ರಾಜಕೀಯ ಜೀವನದಲ್ಲಿ ತಾತ್ಕಾಲಿಕ ಎನ್ನಿಸಿದೆ, ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗಿನ ಮೈತ್ರಿ ಬಗ್ಗೆ ಪP್ಷÀ ತೀರ್ಮಾನಿಸಲಿದೆ, ಎಲ್ಲರಿಗೂ ಒಳಿತಾಗುವ ತೀರ್ಮಾನ ಮಾಡಲಿದೆ.
ಪP್ಷÀದ ತೀರ್ಮಾನಕ್ಕೆ ನಾವು ಬದ್ಧ, ಅಭ್ಯರ್ಥಿ ಆಯ್ಕೆಯಲ್ಲಿ ಪP್ಷÀ ಕೇಳಿದರೆ ಅಭಿಪ್ರಾಯ ಹೇಳುತ್ತೇವೆ ಅಷ್ಟೇ. ತುಮಕೂರು ರಾಜಕೀಯ ಇತಿಹಾಸದಲ್ಲಿ ಲೋಕಸಭಾ ಚುನಾವಣೆಯಲ್ಲಿ ಜನತಾದಳಕ್ಕೆ ಗೆಲುವು ಸಕ್ಕಿರುವುದು ಕಡಿಮೆ ಹಾಗಾಗಿ, ಅಂಕಿ ಅಂಶದ ಹಿನ್ನೆಲೆಯಲ್ಲಿ ಬಿಜೆಪಿಗೆ ಗೆಲ್ಲುವ ಅವಕಾಶ ಜಾಸ್ತಿಯಿದ್ದು ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ ಎಂದರು.