ಎಸ್‌ಡಿಪಿಐ, ಪಿಎಫ್‌ಐ ಭಹಿಷ್ಕಾರಕ್ಕೆ ಕೇಂದ್ರಕ್ಕೆ ವರದಿ

Araga Gnanendra
Published on

ತುಮಕೂರು: ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳನ್ನು ಭಹಿಷ್ಕರಿಸುವ ಬಗ್ಗೆ ಕೇಂದ್ರದ ಗೃಹ ಇಲಾಖೆಗೆ ಎಲ್ಲಾ ಮಾಹಿತಿ ನೀಡಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ನಗರದಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಹಿಂದೆ ರಾಜ್ಯ ಸರ್ಕಾರ ಸಂಘಟನೆಯೊAದನ್ನು ಭಹಿಷ್ಕರಿಸಿದ್ದ ಪ್ರಕರಣದಲ್ಲಿ ನ್ಯಾಯಾಯಲ ತಡೆಯಾಜ್ಞೆ ನೀಡಿದೆ ಹಾಗಾಗಿ, ಈಗ ಕೇಂದ್ರ ಸರ್ಕಾರವೇ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದರು.

ರಾಜ್ಯದಲ್ಲಿ ನಡೆದಿರುವ ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಏಳು ಜನರನ್ನು ವಶಕ್ಕೆ ಪಡೆದಿದ್ದಾರೆ, ವಿವಿಧ ಸಂಘಟನೆಗಳ ಕಾರ್ಯಕರ್ತರು ಇದ್ದಾರೆ ಎಂಬ ಮಾಹಿತಿಯಿದೆ. ಆರೋಪಿಗಳು ಸ್ಥಳೀಯರಾದರೂ ಕೇರಳದೊಂದಿಗೆ ಸಂಪರ್ಕಸಲ್ಲಿರುವ ಮಾಹಿತಿ ಸಿಕ್ಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net