ಅಪಾಯದ ಹಂತಕ್ಕೆ ಬಿಜವರ, ಬೆಲ್ಲದಮಡಗು ಕೆರೆ: ಜಿಲ್ಲಾಧಿಕಾರಿ ದೌಡು

Webbb
Published on

ತುಮಕೂರು: ಜಿಲ್ಲೆಯೆಲ್ಲೆಡೆ ಭರ್ಜರಿ ಮಳೆ ಸುರಿಯಾಲರಂಭಿಸಿದ್ದು ಎಲ್ಲೆಡೆಯೂ ಜಲಪ್ರಳಯದ ಆತಂಕ ಎದುರಾಗಿದೆ.
ಸೋಮವಾರ ರಾತ್ರಿ ತುಮಕೂರು, ಮಧುಗಿರಿ, ಪಾವಗಡ, ಕೊರಟಗೆರೆ ತಾಲೂಕುಗಳಲ್ಲಿ ಅತೀ ಹೆಚ್ಚು ಮಳೆಯಾಗಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಕೃಷಿ ಜಮೀನುಗಳು ಹಾಳಾಗಿದ್ದು ಜನ, ಜಾನುವಾರುಗಳಿಗೆ ಆತಂಕ ಎದುರಾಗಿದೆ.


ಮಧುಗಿರಿಯಲ್ಲಿ ಅತೀ ಹೆಚ್ಚು 1.23ಸೆ.ಮೀ, ಬ್ಯಾಲ್ಯದಲ್ಲಿ 1ಸೆ.ಮೀ ಮಳೆಯಾಗಿದೆ, ಕೊಡಿಗೇನಹಳ್ಳಿ 26ಮಿಮೀ, ಮಿಡಿಗೇಶಿ 40.5, ಐ.ಡಿ.ಹಳ್ಳಿ 62.2, ಚಿಕ್ಕನಾಯಕನಹಳ್ಳಿ 18.4, ಹುಳಿಯಾರು 36.4ಮಿಮೀ ಮಳೆಯಾಗಿದೆ.


ಪಾವಗಡ 30ಮಿಮೀ, ಅರಸೀಕೆರೆ 65.4, ತುರುವೇಕೆರೆ 81.6, ಮಾಯಸಂದ್ರ 82.6, ಶಿರಾ 44.6, ಬರಗೂರು 63.2, ಹುಣುಸೇಹಳ್ಳಿ 56.2, ತುಮಕೂರು 78.4, ಹಿರೇಹಳ್ಳಿ 69.8, ಬೆಳ್ಳಾವಿ 43.8, ತಿಪಟೂರು 45.4, ನೊಣವಿನಕೆರೆ 38.4, ಕಿಬ್ಬನಹಳ್ಳಿ 30.1ಮಿಮೀ ಮಳೆ ಸುರಿದಿದೆ.
ಕುಣಿಗಲ್ 17, ಹುಲಿಯೂರುದುರ್ಗ 87.4, ಮಾರ್ಕೋನಹಳ್ಳಿ 23.3, ಕೊರಟಗೆರೆ 54, ತುಂಬಾಡಿ 50.1, ಹೊಳವನಹಳ್ಳಿ 39.6, ಮಾವತ್ತೂರು 55, ತೋವಿನಕೆರೆ 41.2, ಕೊಳಾಲ 35.2ಮಿಮೀ, ಚೇಳೂರು 30, ಅಂಕಸAದ್ರ 45 ಹಾಗೂ ಹಾಗಲವಾಡಿ 17ಮಿಮೀ ಮಳೆಯಾಗಿದೆ.

ಮಧುಗಿರಿ ತಾಲೂಕಿನ ಚೋಳೇನಹಳ್ಳಿ, ಬಿಜವರ ಹಾಗೂ ಬೆಲ್ಲದಮಡಗು ಕೆರೆಗಳ ಕೋಡಿ ಹರಿದಿದ್ದು ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net