ಸ್ಪರ್ಧೆ ಖಚಿತ, ಕುತಂತ್ರಿಗಳಿಗೆ ರಫೀಕ್ ಟಾಂಗ್
ಚುನಾವಣೆ ಎದುರಿಸುವ ಆರ್ಥಿಕ ಶಕ್ತಿ ನನ್ನಲ್ಲಿದೆ

Rafiq_Cong
Published on

ತುಮಕೂರು

ಮುಂದಿನ ವಿಧಾನಸಭಾ ಚುನಾವಣೆ ಎದುರಿಸುವಷ್ಟು ಆರ್ಥಿಕ ಶಕ್ತಿ ನನ್ನಲ್ಲಿದೆ. ಹಣಕಾಸಿನ ಕೊರತೆ ಇದೆ ಎಂದು ಯಾರಿಗೂ ಹೇಳಿಲ್ಲ. ಅದೆಲ್ಲಾ ಊಹಾಪೋಹ ಅಷ್ಟೆ. ಕಾರ್ಯಕರ್ತರು ಎದೆಗುಂದುವ ಅಗತ್ಯವಿಲ್ಲ. ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಎಸ್.ರಫೀಕ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ.

ಕಳೆದ ಒಂದು ವಾರದಿಂದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ತಾವು ಕಣದಿಂದ ಹಿಂದೆ ಸರಿದಿದ್ದಾರೆ ಎಂಬ ಊಹಾಪೋಹಗಳನ್ನು ಕ್ಷೇತ್ರದಲ್ಲಿ ರಾಜಕೀಯ, ಹಣದ ದುರಾಸೆಯಿಂದ ಕೆಲವು ಕಿಡಿಗೇಡಿಗಳು ಹಬ್ಬಿಸಿದ್ದು ಇದೆಲ್ಲಾ ಹೊರಗಿನಿಂದ ಬಂದು ಕ್ಷೇತ್ರದಲ್ಲಿ ನಮ್ಮ ನಡುವೆ ಬೆಂಕಿಹಚ್ಚುತ್ತಿರುವ ವ್ಯಕ್ತಿಗಳ ಕುತಂತ್ರವಾಗಿದೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ನೂರಕ್ಕೆ ನೂರು ಸತ್ಯ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net