ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಗ್ರಂಥಾಲಯ ಮೇಲ್ವಿಚಾರಕನ ಮೇಲೆ ಶಿಸ್ತು ಕ್ರಮ

01may
Published on

ತುಮಕೂರು: ವಿಧಾನಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಶಿರಾ ತಾಲೂಕು ಹೆಂದೊರೆ ಗ್ರಾಪಂ ಗ್ರಂಥಾಲ ಮೇಲ್ವಿಚಾರಕ ಸಣ್ಣ ಮಂಜುನಾಥ ಎಂಬುವವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ಶಿರಾ ತಾಪಂ ಇಒ ಆದೇಶಿಸಿದ್ದಾರೆ.

ಕರ್ತವ್ಯ ನಿರ್ವಹಿಸುತ್ತಿರುವ ವೇಳೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪಕ್ಷ ಪರವಾಗಿ ತಮ್ಮ ಛಾಯಾಚಿತ್ರ ಇರುವ ಫೋಟೋ ಹಾಕಿರುವ ಬಗ್ಗೆ ಹೆಂದೊರೆ ಗ್ರಾಪಂ ಪಿಡಿಒ ನೀಡಿರುವ ವರದಿಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಸಿಬ್ಬಂದಿಗೆ 24 ಗಂಟೆಯೊಳಗಾಗಿ ಲಿಖಿತ ರೂಪದಲ್ಲಿ ವಿವರಣೆ ನೀಡಲು ಸೂಚಿಸಿ ನೋಟಿಸ್ ನೀಡಿದ್ದರೂ ಉತ್ತರ ನೀಡದ ಹಿನ್ನೆಲೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಎಂಸಿಸಿ ನೋಡಲ್ ಅಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net