ರಾಯಸಂದ್ರ ರವಿಕುಮಾರ್ ಕಾಂಗ್ರೆಸ್ ಪ್ರಚಾರ ಸಮಿತಿಗೆ ಜಿಲ್ಲಾಧ್ಯಕ್ಷ

Tmk_Raysandra_INC_Rural
Published on

ತುಮಕೂರು: ಕೆಪಿಸಿಸಿ ಪ್ರಚಾರ ಸಮಿತಿಗೆ ಜಿಲ್ಲಾಧ್ಯಕ್ಷರ ನೇಮಕವಾಗಿದ್ದು ತುಮಕೂರು ಜಿಲ್ಲೆಗೆ ಲಿಂಗಾಯತ ಸಮುದಾಯದ ರಾಮಸಂದ್ರ ರವಿಕುಮಾರ್‌ಗೆ ಮಹತ್ವದ ಜವಬ್ಧಾರಿ ನೀಡಲಾಗಿದೆ.
2018ರಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ವಿಧಾನಸಭೆಗೆ ಸ್ಫರ್ಧಿಸಿದ್ದ ರಾಮಸಂದ್ರ ರವಿಕುಮಾರ್ ಅವರ ಸಂಘಟನಾ ಶಕ್ತಿಯನ್ನು ಚುನಾವಣೆ ಸಂದರ್ಭದಲ್ಲಿ ಬಳಸಿಕೊಳ್ಳಲು ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಶನಿವಾರ ಆದೇಶಿಸಿದ್ದಾರೆ.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ ತೊರೆದ ನಂತರ ಡಾ.ಜಿ.ಪರಮೇಶ್ವರ್ ಪಾಳಯದಲ್ಲಿ ಗುರುತಿಸಿಕೊಂಡಿರುವ ರಾಯಸಂದ್ರ ರವಿಕುಮಾರ್‌ಗೆ ಚುನಾವಣೆ ಸಂದರ್ಭದಲ್ಲಿ ಮಹತ್ವದ ಜವಬ್ಧಾರಿ ನೀಡುವ ಮೂಲಕ ಯುವಕರನ್ನು ಪಕ್ಷದತ್ತ ಸೆಳೆಯಲು ಕೈ ಪಾಳಯ ತಂತ್ರ ರೂಪಿಸಿದೆ.
ಈಗಾಗಲೇ ಕಾಡುಗೊಲ್ಲ ಸಮುದಾಯದ ಚಂದ್ರಶೇಖರಗೌಡ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಲಿಂಗಾಯತ ಸಮುದಾಯಕ್ಕೂ ಮಹತ್ವದ ಜವಬ್ಧಾರಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net