ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜನ್ಮದಿನ

DSC_7892
Published on

ತುಮಕೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದ ನೆಪಮಾಡಿಕೊಂಡ ಬಿಜೆಪಿ ಮುಖಂಡರು ರಾಜಕೀಯ ಮೇಲಾಟ ನಡೆಸಿದ್ದು, ಜಿಲ್ಲೆಯೆಲ್ಲೆಡೆ ವಿವಿಧ ಕಾರ್ಯಕ್ರಮ ಆಯೋಜಿಸಲಾಯಿತು.

ನಗರದಲ್ಲಿ ಸೋಮವಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಒಂದು ಕಡೆ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ನೇತೃತ್ವದಲ್ಲಿ ಮತ್ತೊಂದೆಡೆ ಆಚರಣೆ ನಡೆದಿದ್ದು ಸಾರ್ವಜನಿಕರಿಗೆ ಸಿಹಿ ವಿತರಣೆ ಸೇರಿದಂದೆ ವಿವಿಧ ಕಾರ್ಯಕ್ರಮಗಳು ಜರುಗಿದವು.

ಬಿ.ಎಚ್.ರಸ್ತೆಯ ಅಭಯ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ನೇತೃತ್ವದಲ್ಲಿ `ವಿಜಯ ರಥ ಯಾತ್ರೆ'ಗೆ ಚಾಲನೆ ನೀಡಲಾಯಿತು.

ತುಮಕೂರು ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಅಕಾಂಕ್ಷಿ ಮಾಜಿ ಸಚಿವ ಸೊಗಡು ಶಿವಣ್ಣ ಕೂಡ ಅವರ ಅಭಿಮಾನಿಗಳ ಜತೆಗೂಡಿ ತುಮಕೂರು ವಿವಿ ಮುಂಭಾಗ ಬಿಎಸ್‌ವೈ ಜನ್ಮದಿನದ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಿದರು.

ಪಕ್ಷದ ಹಿರಿಯ ಮುಖಂಡ ಬಿಎಸ್‌ವೈ ಅವರ ಜನ್ಮದಿನವನ್ನು ನಗರದಲ್ಲಿಯೇ ಪ್ರತ್ಯೇಕವಾಗಿ ಆಚರಿಸುವ ಮೂಲಕ ಚುನಾವಣೆ ಸಮಯದಲ್ಲಿ ಬಿಜೆಪಿಯಲ್ಲಿ ಬಣ ರಾಜಕೀಯ ಮತ್ತಷ್ಟು ಜೋರಾಗುವ ಸೂಚನೆಯನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net