ಚಡ್ಡಿಯಲ್ಲಿ ಮೂತ್ರದ ಕಾರಣಕ್ಕೆ ಮಗುನ ಗುಪ್ತಾಂಗ ಸುಟ್ಟ ಅಂಗನವಾಡಿ ಸಿಬ್ಬಂದಿ

WEB_ANGANAVAADI
Published on

ಚಿಕ್ಕನಾಯಕನಹಳ್ಳಿ: ಚಡ್ಡಿಯಲ್ಲಿಯೇ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಾನೆ ಎಂಬ ಕ್ಷುಲ್ಲಕ ಕಾರಣಕ್ಕೆ ಗಂಡು ಮಗುವಿನ ಗುಪ್ತಾಂಗಕ್ಕೆ ಬೆಂಕಿಯಿಂದ ಸುಟ್ಟಿರುವ ಅಮಾನವೀಯ ಘಟನೆ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.

ಚಿಕ್ಕನಾಯಕನಹಳ್ಳಿ ತಾಲೂಕು ಗೋಡೆಕೆರೆ ಅಂಗನವಾಡಿ ಕೇಂದ್ರದ ವಿದ್ಯಾರ್ಥಿಯ ಹೊಟ್ಟೆ ಹಾಗೂ ಗುಪ್ತಾಂಗ ಸುಟ್ಟ ಗಾಯವಾಗಿದ್ದು ಮನೆಯಲ್ಲಿ ಅಜ್ಜಿ ಮಗುವಿನ ಸ್ನಾನ ಮಾಡಿಸುವಾಗ ಪ್ರಕರಣ ಬೆಳಕಿಗೆ ಬಂದಿದೆ.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು ನೀಡಲಾಗಿದ್ದು ಮಕ್ಕಳ ಹಕ್ಕು ರಕ್ಷಣಾ ಘಟಕದ ಅಧಿಕಾರಿಗಳು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಅಂಗನವಾಡಿ ಶಿಕ್ಷಕ ಹಾಗೂ ಸಹಾಯಕಿಗೆ ಶೋಕಸ್ ನೋಟಿಸ್ ನೀಡಿ, ಲಿಖಿತವಾಗಿ ಕ್ಷಮಾಪಣಾಪತ್ರ ಪಡೆದು ಗಂಭೀರ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net