

1
ತುಮಕೂರು:
ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಡಿ.14 ರಂದು ನಿಗದಿಯಾಗಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆಯನ್ನು ಡಿ.29ಕ್ಕೆ ಮುಂದೂಡಲಾಗಿದೆ.
ದೆಹಲಿಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರ ಜತೆ ಪ್ರಮುಖ ಸಭೆಯಲ್ಲಿ ಕುಮಾರಸ್ವಾಮಿ ಭಾಗಿಯಾಗುತ್ತಿರುವ ಹಿನ್ನೆಲೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 14ರಂದು ನಡೆಯಬೇಕಿದ್ದ ಪಂಚ ರತ್ನ ರಥಯಾತ್ರೆ 29ಕ್ಕೆ ಮುಂದೂಡಲಾಗಿದೆ.
ಗೊಂದಲಬೇಡ: ದೆಹಲಿ ಕಾರ್ಯಕ್ರಮ ತುರ್ತಾಗಿ ನಿಗದಿಯಾಗಿರುವುದರಿಂದ ಪಂಚರತ್ನ ರಥಯಾತ್ರೆಯನ್ನು ಗ್ರಾಮಾಂತರ ಕ್ಷೇತ್ರದಲ್ಲಿ ಮುಂದೂಡಲಾಗಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ. 29ಕ್ಕೆ ಇತಿಹಾಸ ನಿರ್ಮಾಣವಾಗುವಂತೆ ಪಂಚರತ್ನ ರಥಯಾತ್ರೆಯನ್ನು ಸಂಘಟಿಸಲಾಗುವುದು ಎಂದು ಶಾಸಕ ಡಿ.ಸಿ ಗೌರಿಶಂಕರ್ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.