ಜತೆ ಜತೆಯಲಿ ಪರಂ, ಕೆಎನ್ನಾರ್, ಜಯಚಂದ್ರ !!

mutt_Cong
Published on

ತುಮಕೂರು: ಘಟಾನುಘಟಿ ನಾಯಕರ ನಡುವಿನ ಮುನಿಸಿನಿಂದ ಸೊರಗಿದ್ದ ಜಿಲ್ಲಾ ಕಾಂಗ್ರೆಸ್‌ನಲ್ಲಿ ಶನಿವಾರ ಹೊಸ ಚೈತನ್ಯ ಕಾಣಿಸಿತ್ತು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಜತೆಯಲ್ಲಿ ಸಿದ್ದಗಂಗಾಮಠದ ಅಂಗಳದಲ್ಲಿ ಜಿಲ್ಲಾ ಕಾಂಗ್ರೆಸ್‌ನ ತ್ರಿಮೂರ್ತಿಗಳು ಒಟ್ಟಿಗೆ ಕಾಣಿಸಿಕೊಂಡಿದ್ದು ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿತ್ತು.

ಪಕ್ಷದಲ್ಲಿನ ವೇದಿಕೆಗಳಲ್ಲು ಪರಸ್ಪರ ಮುಖ ನೋಡಿಕೊಳ್ಳದಷ್ಟು ದೂರವಾಗಿದ್ದ ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಜತೆ ಜತೆಯಲ್ಲಿ ಫೋಟೋಗೆ ಪೋಸ್ ಕೊಟ್ಟರು. ಮಾಜಿ ಸಚಿವ ಜಯಚಂದ್ರ ಸಹ ಇದ್ದರು.

ಶ್ರೀಮಠದಲ್ಲಿ ಕೆಎನ್ನಾರ್: ಪಕ್ಷದ ರಾಷ್ಟ್ರೀಯ ನಾಯಕರುಗಳೇ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟಾಗಲು ಕಾಣಿಸಿಕೊಳ್ಳದ ಕೆ.ಎನ್.ರಾಜಣ್ಣ ಶನಿವಾರ ಶ್ರೀಮಠದ ಅಂಗಳದಲ್ಲಿ ಪ್ರತ್ಯಕ್ಷರಾಗಿದ್ದು ರಾಜಕೀಯವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ. ಶ್ರೀಮಠದ ಬಳಿಯ ಕ್ಯಾತಸಂದ್ರ ವಾಸಿಯಾಗಿದ್ದರೂ 3 ದಶಕಗಳಿಂದ ರಾಜಣ್ಣ ಒಮ್ಮೆಯೂ ಮಠಕ್ಕೆ ಭೇಟಿ ಕೊಟ್ಟಿರಲಿಲ್ಲ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net