

ತುಮಕೂರು : ಜಿಲ್ಲಾ ಪಂಚಾಯತಿ ನೂತನ ಸಿಇಒ ಜಿ.ಪ್ರಭು ಬುಧವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಸಿಇಒ ಡಾ.ಕೆ.ವಿದ್ಯಾಕುಮಾರಿ ಅವರು ಹೂಗುಚ್ಛ ನೀಡಿ ಪ್ರಭು ಅವರನ್ನು ಸ್ವಾಗತಿಸಿದರು.
ಈ ಹಿಂದೆ ಚಿಕ್ಕಮಗಳೂರು ಜಿಪಂ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಿ.ಪ್ರಭು ಅವರನ್ನು ಇತ್ತೀಚೆಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರನ್ನಾಗಿ ವರ್ಗಾಯಿಸಲಾಗಿತ್ತು. ಇದೀಗ ಆದೇಶ ಬದಲಾಯಿಸಿ ತುಮಕೂರು ಜಿಪಂ ಸಿಇಒ ಆಗಿ ನೇಮಿಸಿ ಸರ್ಕಾರ ಬುಧವಾರ ಆದೇಶಿಸಿದೆ. ಮಧ್ಯಾಹ್ನದ ಹೊತ್ತಿಗೆ ಪ್ರಭು ಅವರು ಜಿಲ್ಲಾ ಪಂಚಾಯತ್‌ಗೆ ಆಗಮಿಸಿ ಅಧಿಕಾರ ಸ್ವೀಕರಿಸಿದರು.
ತುಮಕೂರು ಜಿಪಂ ಸಿಇಒ ಆಗಿದ್ದ ಡಾ.ಕೆ.ವಿದ್ಯಾಕುಮಾರಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಸ್ಥಳ ನಿಯೋಜನೆ ಆಗಿಲ್ಲ.