

ತುಮಕೂರು: ಕವಿಗಳು, ನಿರ್ದೇಶಕರು ನಾಟಕದ ಪಾತ್ರಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಾರೆ. ಓದುವುದಕ್ಕಿಂತ ನಾಟಕ ನೋಡುವುದರಲ್ಲಿ ಹೆಚ್ಚು ಅನುಭೂತಿ ಲಭಿಸುತ್ತದೆ ಎಂದು ಕುಲಪತಿ ಪ್ರೊ.ಎಂ.ವೆAಕಟೇಶ್ವರಲು ಅಭಿಪ್ರಾಯಪಟ್ಟರು.
ತುಮಕೂರು ವಿವಿ ಸಾಂಸ್ಕೃತಿಕ ಚಟುವಟಿಕೆಗಳ ಘಟಕ ಮತ್ತು ಕನ್ನಡ ವಿಭಾಗ ಸೋಮವಾರ ಆಯೋಜಿಸಿದ್ದ ಟಿ.ಪಿ.ಕೈಲಾಸಂ ಅವರ `ಟೊಳ್ಳು ಗಟ್ಟಿ' ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಾತ್ರಧಾರಿ ಸಂಪೂರ್ಣವಾಗಿ ಪಾತ್ರವೇ ಆಗಿರುತ್ತಾನೆ, ನಮ್ಮ ಕಲಾ ಕಾಲೇಜಿನ ವಿದ್ಯಾರ್ಥಿಗಳು ಎರಡು ತಿಂಗಳು ತಾಲೀಮು ನಡೆಸಿ ಅಭಿನಯಿಸುತ್ತಿರುವ ಈ ನಾಟಕ ಪ್ರದರ್ಶನ ಯಶಸ್ವಿಯಾಗಲಿ ಎಂದರು.
ವಿವಿ ಕಲಾ ಕಾಲೇಜಿನ ವಿದ್ಯಾರ್ಥಿಗಳಿಂದ ರಂಗ ನಿರ್ದೇಶಕ ಮೆಳೇಹಳ್ಳಿ ದೇವರಾಜು ನಿರ್ದೇಶಿಸಿದ ಟಿ. ಪಿ. ಕೈಲಾಸಂ ಅವರ ಟೊಳ್ಳು ಗಟ್ಟಿ' ನಾಟಕ ಪ್ರದರ್ಶನ ನಡೆಯಿತು. ಶಶಿಕುಮಾರ್(ಹಿರಿಯಣ್ಣಯ್ಯ), ಗಗನ ಕೆ. ಸಿ. (ನಾಗಮ್ಮ), ಕಾವ್ಯ ಎನ್. (ಭಗೀರಥಮ್ಮ), ಶಿವಶಂಕರ್ (ರಾಮಶಾಸ್ತಿç), ಪಾತಲಿಂಗಯ್ಯ (ಪುಟ್ಟು), ಅಕ್ಷಯ್ (ಮಾಧು), ದೀಕ್ಷಾ (ಪಾತು), ನಂದಿತಾ ದಿನೇಶ್ ಭಟ್ (ಸಾತು ಹಾಗೂ ಸುಬ್ಬಾಚಾರ್), ಸವಿತ ಯೋಗೇಶ್ ಸವಿತಾ ಯೋಗೆಶ್ (ಟಿ. ಪಿ. ಕೈಲಾಸಂ) ಪಾತ್ರಗಳಲ್ಲಿ ಅಭಿನಯಿಸಿದ್ದರು.
ಕುಲಸಚಿವೆ ನಾಹಿದಾ ಜಮ್‌ಜಮ್ ಮಾತನಾಡಿದರು, ಪ್ರಾಚಾರ್ಯ ಪ್ರೊ.ಬಿ.ಕರಿಯಣ್ಣ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೆಂಕಟರೆಡ್ಡಿ ರಾಮರೆಡ್ಡಿ, ಸಾಂಸ್ಕೃತಿಕ ಚಟುವಟಿಕೆಗಳ ಘಟಕದ ಸಂಯೋಜಕ ಡಾ.ಎಸ್.ಶಿವಣ್ಣ ಬೆಳವಾಡಿ, ಅಧ್ಯಾಪಕರಾದ ಡಾ.ಎಚ್.ಆರ್.ರೇಣುಕಾ, ಡಾ.ವರದರಾಜು, ಡಾ.ರಾ.ನ.ನಿರಂಜನ್, ಎಲ್.ಹನುಮಯ್ಯ ಹಾಗೂ ಕೃಷ್ಣಾ ನಾಯಕ್ ಇದ್ದರು.