ರಾಜಕೀಯ ಒತ್ತಡದಿಂದ ಸಾವರ್ಕರ್ ಪೀಠ

G Parameshwar
Published on

ತುಮಕೂರು: ತುಮಕೂರು ವಿವಿಯಲ್ಲಿ ರಾಜಕೀಯ ಒತ್ತಡದಿಂದ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆ ಮಾಡಲಾಗಿದೆ ಎಂದು ಮಾಜಿ ಡಿಸಿಎಂ, ಶಾಸಕ ಡಾ.ಜಿ.ಪರಮೇಶ್ವರ ಆರೋಪಿಸಿದರು.


ಸರ್ಕಾರದ ಸೂಚನೆಯಿಲ್ಲದೆ ಏಕಾಏಕಿ ಕುಲಪತಿ, ಕುಲಸಚಿವರು, ಸಿಂಡಿಕೇಟ್ ಸದಸ್ಯರುಗಳು ಈ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ, ಏನು ಮಾಡುತ್ತಾರೋ ಮಾಡಲಿ ನಾವು ನೋಡುತ್ತಿರುತ್ತೇವೆ ಸರ್ಕಾರ ಬದಲಾದಾಗ ಎಲ್ಲರೂ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.


ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ತುಮಕೂರು ವಿವಿ ಸ್ಥಾಪನೆ ಮಾಡಿದ್ದೆ ಆದರೆ, ಆನಂತರದಲ್ಲಿ ಅನುದಾನ ನೀಡದೆ ಶೈಕ್ಷಣಿಕ ಪ್ರಗತಿಗೆ ಚಿಂತನೆ ನಡೆಸದೆ ಇಂತಹ ವಿವಾದಗಳಿಗೆ ಅವಕಾಶ ನೀಡಿದ್ದಾರೆ ಎಂದು ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net