ಹೆಣ್ಣು ಸ್ವಾವಲಂಭಿಯಾಗದ ಹೊರತು ಹೋರಾಟ, ಪ್ರತಿಜ್ಞೆಯಿಂದ ಫಲವಿಲ್ಲ; ಕೃಷಿ ತಜ್ಞೆ ಆರ್.ಅರುಣಾ

09
Published on

ತುಮಕೂರು: ಹಲವಾರು ರೀತಿಯಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ, ಆಕೆಗೆ ಯಾವ ಹೋರಾಟ, ಪ್ರತಿಜ್ಞೆಯಿಂದ ಯಾವ ಫಲವಿಲ್ಲ. ನಮ್ಮನ್ನು ನಾವು ಗುರುತಿಸಿಕೊಂದು ಸ್ವಾಲವಂಭಿಯಾಗಬೇಕಿದೆ ಎಂದು ಆದರ್ಶ ಕೃಷಿಕರಾದ ಆರ್.ಅರುಣಾ ಅಭಿಪ್ರಾಯಪಟ್ಟರು.

ತುಮಕೂರು ವಿವಿ ಮಹಿಳಾ ಅಧ್ಯಯನ ಕೇಂದ್ರ ಮತ್ತು ವಿವಿ ವಿಜ್ಞಾನ ಕಾಲೇಜಿನ ಮಹಿಳಾ ಅಧ್ಯಯನ ವಿಭಾಗ ಇವರ ಸಹಯೋಗದೊಂದಿಗೆ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಾವು ಯಾರಿಗೂ ಅವಲಂಬಿತರಾಗದೆ ಯಾರ ಬೆಂಬಲವಿರದಿದ್ದರೂ ನಾವೇ ಸ್ವತಃ ದುಡಿದು ಉನ್ನತ ಮಟ್ಟಕ್ಕೆ ಏರುವಂತಾಗಬೇಕು. ತುಳಿದವರ ಮುಂದೆ ಎದ್ದು ನಿಲ್ಲಬೇಕೇ ಹೊರತು ಹಿಂಜರಿಯಬಾರದು ಎಂದರು.

ಸಮಾಜದ ಸಕಾರಾತ್ಮಕ ಬದಲಾವಣೆಯ ರೂಪವೇ ಹೆಣ್ಣು. ಸ್ವಾವಲಂಭಿಯಾಗಿ ಬದುಕು ನಡೆಸಲು, ಸದೃಢಳನ್ನಾಗಿಸಿ, ಸವಾಲುಗಳನ್ನು ಎದುರಿಸಿ ಸ್ವಂತ ಬದುಕು ಕಟ್ಟಿಕೊಳ್ಳುವ ಆಕೆಗೆ ಸಾಮರ್ಥ್ಯ ರೂಪಿಸಬೇಕು ಎಂದು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆAಕಟೇಶ್ವರಲು ಹೇಳಿದರು.

ತುಮಕೂರು ವಿವಿ ಕುಲಸಚಿವೆ ನಾಹಿದಾ ಜಮ್‌ಜಮ್ ಮಾತನಾಡಿ, ಸಮಾಜದಲ್ಲಿ ಹೆಣ್ಣೆಂಬ ಕೀಳಿರಿಮೆ ತಪ್ಪಬೇಕು ಎಂದರು.

ಪ್ರಾಚಾರ್ಯ ಡಾ. ಪ್ರಕಾಶ್ ಎಂ.ಶೇಟ್, ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ.ಅಣ್ಣಮ್ಮ, ಪ್ರೊ.ನೂರ್ ಅಫ್ಜಾ ಇದ್ದರು.

ತುಮಕೂರು ವಿವಿ ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಜ್ಯೋತಿ, ಉಪನ್ಯಾಸಕಿ ಆಶಾರಾಣಿ, ಆರ್.ಕವಿತಾ, ಪಿ.ಪರಿಣಿತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net