

ತುಮಕೂರು: ತುಮಕೂರು ವಿವಿ ಕುಲಸಚಿವ ಹುದ್ದೆಗೆ ಕೊರಟಗೆರೆ ತಹಸೀಲ್ದಾರ್ ನಹೀದಾ ಜಮ್‌ಜಮ್ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.
ಗ್ರೇಡ್ 1 ವೃಂದದ ತಹಸೀಲ್ದಾರ್‌ಗಳಿಗೆ ಕರ್ನಾಟಕ ಆಡಳಿತ ಸೇವೆ(ಕಿರಿಯಶ್ರೇಣಿ)ಗೆ ಬಡ್ತಿ ನೀಡಲಾಗಿದ್ದು ಪ್ರೊ.ಶಿವಚಿತ್ತಪ್ಪ ಅವರ ಸ್ಥಾನಕ್ಕೆ ಕೆಎಎಸ್ ಅಧಿಕಾರಿಯನ್ನು ನೇಮಿಸಿರುವುದು ವಿವಿ ಆವರಣದಲ್ಲಿ ತುರುಸಿನ ಚರ್ಚೆಗೆ ಗ್ರಾಸವಾಗಿದೆ.
ತಿಪಟೂರು ತಹಸೀಲ್ದಾರ್ ಆರ್.ಜಿ.ಚಂದ್ರಶೇಖರ್ ಅವರಿಗೆ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ ರಾಜ್ಯಪ್ರತಿನಿಧಿ 1ರ ಹುದ್ದೆಗೆ ಸ್ಥಳ ನಿಯೋಜಿಸಲಾಗಿದೆ.