

ತುಮಕೂರು: ವಿಶ್ವ ವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಜ್ಞಾನಿಗಳನ್ನಾಗಿಸುವ ದೇಗುಲಗಳಾಗಬೇಕು. ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ಸಹಕಾರಿಗಳಾಗಬೇಕು ಎಂದು ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ಬಿದರಕಟ್ಟೆಯಲ್ಲಿರುವ ತುಮಕೂರು ವಿಶ್ವವಿದ್ಯಾನಿಲಯದ 240-ಎಕರೆ ನೂತನ ಕ್ಯಾಂಪಸ್ ಱಜ್ಞಾನಸಿರಿ, ಶೈಕ್ಷಣಿಕ ಭವನ ಹಾಗೂ ಇತರ ಕಟ್ಟಡಗಳನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸವುಳ್ಳ ಭಾರತೀಯ ಶಿಕ್ಷಣ ಪದ್ಧತಿಯ ಮಹತ್ವವನ್ನು ವಿದ್ಯಾರ್ಥಿಗಳು ಮನಗಾಣಬೇಕು ಎಂದರು.
ಡಿಜಿಟಲ್ ಇಂಡಿಯಾ ಪರಿಕಲ್ಪನೆ ಬಲಿಷ್ಟವಾಗುವ ಮೂಲಕ ಆಡಳಿತವೇ ಮೊದಲಾದ ರಂಗಗಳಲ್ಲಿ ಪಾರದರ್ಶಕತೆ ಸಾಧ್ಯವಾಗಿದೆ. ಉನ್ನತ ಶಿಕ್ಷಣ ಪಡೆಯುವ ಮೂಲಕ ಯುವಕರು ಈ ಪರಿಕಲ್ಪನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬೇಕು ಎಂದರು.
ವಿಕಸಿತ ಭಾರತ ಪರಿಕಲ್ಪನೆ ದೇಶದ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡಿದೆ. ಯುವಕರು ಬಲಿಷ್ಠ ಭಾರತ ನಿಮಾರ್ಣದ ಕನಸಿಗೆ ಪೂರಕವಾಗಿ ತಮ್ಮ ವ್ಯಕ್ತಿತ್ವ ವಿಕಾಸವನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ, ತುಮಕೂರು ವಿಶ್ವವಿದ್ಯಾನಿಲಯದ ಬಗ್ಗೆ ತಾವು ಅಪಾರ ಭರವಸೆ ಇಟ್ಟುಕೊಂಡಿದ್ದು ಅದರ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿರುವುದಾಗಿ ತಿಳಿಸಿದರು.
ಅಧಿಕಾರ ಇರಲಿ ಇಲ್ಲದಿರಲಿ, ತುಮಕೂರು ವಿಶ್ವವಿದ್ಯಾನಿಲಯದ ಜೊತೆಗೆ ನಾವು ಸದಾ ಇರುತ್ತೇವೆ. ಹೊಸ ಕ್ಯಾಂಪಸ್ಗೆ ರೂ. 40 ಕೋಟಿ ವೆಚ್ಚದ ಸಂಪರ್ಕ ರಸ್ತೆ ಯೋಜನೆಯನ್ನು ಈಗಾಗಲೇ ರೂಪಿಸಲಾಗಿದೆ. ಇನ್ನಷ್ಟು ಕಟ್ಟಡಗಳು, ಬೋಧಕ-ಬೋಧಕೇತರರ ನೇಮಕಾತಿ ಹಾಗೂ ಹಣಕಾಸು ಬೆಂಬಲ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಭಾರತದ ಶೈಕ್ಷಣಿಕ ಪ್ರಯಾಣವು ಸಣ್ಣದಲ್ಲ. ತಕ್ಷಶಿಲಾದಂತಹ ಅಪೂರ್ವ ಶಿಕ್ಷಣ ಕೇಂದ್ರಗಳ ಇತಿಹಾಸ ನಮ್ಮದಿದೆ. ಇಡೀ ಜಗತ್ತಿನಲ್ಲೇ ಅತ್ಯಂತ ಬುದ್ಧಿವಂತ ಇಂಜಿನಿಯರುಗಳನ್ನು ಭಾರತ ನೀಡಿದೆ. ಒಂದು ಕಾಲಕ್ಕೆ ಶಿಕ್ಷಣ ಕೆಲವರಿಗೆ ಮಾತ್ರ ಸೀಮಿತವಾಗಿತ್ತು. ಈಗ ಶಿಕ್ಷಣದ ಪ್ರಜಾಪ್ರಭುತ್ವೀಕರಣ ಸಾಧ್ಯವಾಗಿದೆ ಎಂದರು.
ಯಾವ ದೇಶದಲ್ಲಿ ವಿದ್ಯಾವಂತ ಜನ ಇರುತ್ತಾರೋ ಆ ದೇಶ ಬೇಗ ಅಭಿವೃದ್ಧಿ ಸಾಧಿಸುತ್ತದೆ ಎಂಬುದಕ್ಕೆ ಕೊರಿಯಾ ದೇಶ ಒಳ್ಳೆಯ ಉದಾಹರಣೆ. ನಮ್ಮ ದೇಶದಲ್ಲಿ 1100 ವಿಶ್ವವಿದ್ಯಾನಿಲಯಗಳು, 43000 ಪದವಿ ಕಾಲೇಜುಗಳು, 50 ಮಿಲಿಯನ್ ವಿದ್ಯಾರ್ಥಿಗಳಿದ್ದಾರೆ. ನಾವೂ ಅಭಿವೃದ್ಧಿಯ ನಿಟ್ಟಿನಲ್ಲಿ ದಾಪುಗಾಲು ಹಾಕಲು ಇವು ಸಹಕಾರಿಯಾಗುತ್ತವೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ವಿಶ್ವವಿದ್ಯಾನಿಲಯಗಳಿಗೆ ಆರ್ಥಿಕ ಸಂಪನ್ಮೂಲ ಕ್ರೋಢಿಕರಣ ಕಫ್ಟಿವಾಗಿದೆ. ವಿಶ್ವವಿದ್ಯಾನಿಲಯಗಳ ಜೊತೆ ಮತ್ತಫಿ್ಟು ಕಾಲೇಜುಗಳು ಸಂಯೋಜನೆಗೊಂಡಾಗ ಆರ್ಥಿಕ ಸಂಪನ್ಮೂಲದ ಕ್ರೋಢಿಕರಣಕ್ಕೆ ಸಹಕಾರಿಯಾಗುತ್ತದೆ. ಪಿಎಂಉಫಿಾ ಯೋಜನೆಯಲ್ಲಿ ತುಮಕೂರು ವಿವಿಗೆ ರೂ. 20 ಕೋಟಿ ಅನುದಾನ ಮಂಜೂರಾಗಿದೆ. ಇಂತಹ ಅನುದಾನಗಳು ವಿವಿ ಅಭಿವೃದ್ಧಿಗೆ ಪೂರಕವಾಗಲಿವೆ ಎಂದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಗೌಡ ಮಾತನಾಡಿ ಜ್ಞಾನಸಿರಿ ಕ್ಯಾಂಪಸ್ ಶ್ರೇಫ್ಠಿ ಶಿಕ್ಷಣಕ್ಕೆ ಬುನಾದಿಯಾಗಲಿ. ಇಲ್ಲಿ ಸಂಸ್ಕಾರಯುತ ಶಿಕ್ಷಣವನ್ನ ಪಡೆಯುತ್ತಾ ವಿದ್ಯಾರ್ಥಿಗಳು ಡಾ. ಬಿ. ಆರ್. ಅಂಬೇಡ್ಕರ್, ಸರ್.ಎಂ.ವಿಶ್ವೇಶ್ವರಯ್ಯ ಅವರಂತಹ ಜ್ಞಾನಿಗಳಾಗಿ ರೂಪುಗೊಳ್ಳಬೇಕು ಎಂದರು.
ತುಮಕೂರು ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು, ಕುಲಸಚಿವರಾದ ನಾಹಿದಾ ಜಮ್ ಜಮ್, ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕ ಜಿ. ಬಿ. ಜ್ಯೋತಿ ಗಣೇಶ್, ಗಳಿಗೇನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಣ್ಣ, ನಾಗವಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಮಂಗಳಗೌರಮ್ಮ ಎಸ್., ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಕೆ. ವಿ. ಅಶೋಕ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.