ವಿವಿ ಕಲಾ ಕಾಲೇಜಿಗೆ ಪ್ರವೇಶ ಆರಂಭ

tumkur-vv
Published on

ತುಮಕೂರು: ತುಮಕೂರು ವಿವಿ ಕಲಾ ಕಾಲೇಜಿನ 2023-24ನೇ ಶೈಕ್ಷಣಿಕ ಸಾಲಿನ ಬಿಎ, ಬಿಬಿಎ, ಬಿಕಾಂ, ಬಿಎಸ್‌ಡಬ್ಲೂö್ಯ ಪದವಿ ತರಗತಿಗಳ ಪ್ರಥಮ ವರ್ಷದ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಅರ್ಹ ವಿದ್ಯಾರ್ಥಿಗಳು ಆನ್ಲೆÊನ್ ಮೂಲಕ ಅರ್ಜಿ ಸಲ್ಲಿಸಬಹುದು.

ಬಿಎ, ಬಿಬಿಎ, ಬಿಎಸ್‌ಡಬ್ಲೂö್ಯ ಪದವಿಗಳಿಗೆ ಯುಯುಸಿಎಂಎಸ್ ಮೂಲಕ ಅರ್ಜಿ ಸಲ್ಲಿಸಿ ಅಗತ್ಯ ದಾಖಲೆಗಳೊಂದಿಗೆ ಕಾಲೇಜಿಗೆ ಬಂದು ನೇರ ಪ್ರವೇಶ ಪಡೆಯಲು ಅವಕಾಶವಿದೆ. ಕಲಾ ವಿಭಾಗದಲ್ಲಿ ಕನ್ನಡ, ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತç, ರಾಜ್ಯಶಾಸ್ತç, ಸಮಾಜಶಾಸ್ತç, ಪತ್ರಿಕೋದ್ಯಮ, ಮನಃಶಾಸ್ತç, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಮುಂತಾದ ಐಚ್ಛಿಕ ವಿಷಯಗಳಿವೆ. ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಉರ್ದು ಭಾಷಾವಿಷಯಗಳಿವೆ.
ಬಿ.ಕಾಂ. ಪದವಿಗೆ ಆನ್ಲೆÊನ್ ಮೂಲಕ ಅರ್ಜಿ ಸಲ್ಲಿಸಲು ಜೂ.3 ಕೊನೆಯ ದಿನವಾಗಿದೆ. ಜೂ.9ರಂದು ಜ್ಯೇಷ್ಠತಾ ಪಟ್ಟಿ ಪ್ರಕಟಿಸಿ, ಜೂನ್ 14ರಂದು ಕೌನ್ಸೆಲಿಂಗ್ ನಡೆಸಿ ಪ್ರವೇಶ ನೀಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net