ಮತದಾನಕ್ಕೆ ಆಸಕ್ತಿ ತೋರದ ತೃತೀಯ ಲಿಂಗಿಗಳು!

Voter
Published on

ತುಮಕೂರು: ಜಿಲ್ಲೆಯ 11 ಕ್ಷೇತ್ರಗಳಲ್ಲಿಯೂ ತೃತೀಯ ಲಿಂಗಿಗಳು ಮತದಾನಕ್ಕೆ ಆಸಕ್ತಿ ತೋರಿಸದಿರುವುದು ಜಿಲ್ಲಾಡಳಿತದ ಜಾಗೃತಿಯ ಕೊರತೆಯನ್ನು ತೆರೆದಿಟ್ಟಿದೆ. ಜಿಲ್ಲೆಯಲ್ಲಿದ್ದ 108 ಇತರೆ ಮತದಾರರ ಪೈಕಿ ಕೇವಲ 20 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ.

ಇನ್ನೂ 88 ಮತದಾರರು ಮತದಾನದಿಂದ ದೂರಉಳಿದಿರುವ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಚಿಂತನೆ ನಡೆಸಿ ಭವಿಷ್ಯದಲ್ಲಿಯಾದರೂ ಅವರಲ್ಲಿ ಮತದಾನದ ಮಹತ್ವ ಸಾರುವ ಕೆಲಸ ಮಾಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net