

ತುಮಕೂರು: ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದು ರೈತರು ಕೊಂಚ ನಿರಾಳರಾಗುವಂತಾಗಿದೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲಾಗುತ್ತಿದೆ ಎಂದು ಈ ವಿಷಯದಲ್ಲಿ ವಿರೋಧ ಪಕ್ಷಗಳ ಅಪಪ್ರಚಾರ ನಡೆಯುತ್ತಿದೆಯಷ್ಟೇ, ರಾಜ್ಯದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವುದಿಲ್ಲ, ಉಚಿತ ವಿದ್ಯುತ್ ಮುಂದುವರಿಯಲಿದೆ ಎಂದಿದ್ದಾರೆ.
ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ಶುಲ್ಕ ಪರಿಷ್ಕರಣೆ ಮಾಡಬೇಕು ಎಂದು 2015ರಲ್ಲಿ ಅಂದಿನ ರಾಜ್ಯ ಸರ್ಕಾರ ತೀಮಾನ ತೆಗೆದುಕೊಂಡಿತ್ತು ಆದರೆ, ನಮ್ಮ ಸರ್ಕಾರ ವರ್ಷಕೊಮ್ಮೆಯಷ್ಟೇ ಪರಿಷ್ಕರಣೆ ಮಾಡಿದೆ ಎಂದು ದರ ಹೆಚ್ಚಳ ಸಮರ್ಥಿಸಿಕೊಂಡರು.