ಪರಮೇಶ್ವರ್ ಜತೆ ಸಣ್ಣ ಭಿನ್ನಾಭಿಪ್ರಾಯ ಕೂಡ ಇಲ್ಲ; ಸಿದ್ದರಾಮಯ್ಯ

Parameshwar- Siddaramaiah 1
Published on

ಕೊರಟಗೆರೆ: ನಾನು ಹಾಗೂ ಡಾ.ಜಿ.ಪರಮೇಶ್ವರ್ ನಡುವೆ ಒಂದು ಸಣ್ಣ ಭಿನ್ನಾಭಿಪ್ರಾಯ ಕೂಡ ಇಲ್ಲ, ಪರಮೇಶ್ವರ್ ಗೆದ್ದರೆ ನಾನು ಗೆದ್ದ ಹಾಗೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣಾ ಪ್ರಚಾರ ಮಾಡಿದರು.

ಪಟ್ಟಣದಲ್ಲಿ ಸೋಮವಾರ ರಾತ್ರಿ ಡಾ.ಜಿ.ಪರಮೇಶ್ವರ ಪರವಾಗಿ ಮತಪ್ರಚಾರ ನಡೆಸಿದ ಸಿದ್ದರಾಮಯ್ಯ, ಕೊರಟಗೆರೆಯಲ್ಲಿ ರಾಜೀವಭವನ ಉದ್ಘಾಟನೆಗೆ ನಾನು ಗೈರಾಗಿದ್ದನ್ನು ದೊಡ್ಡದು ಮಾಡಿ ಅಪಪ್ರಚಾರ ಮಾಡಿದ್ದಾರೆ ಎಂದರು.

2013ರಲ್ಲಿಯೂ ಇದೇ ತರಹ ದೊಡ್ಡ ಅಪಪ್ರಚಾರ ಮಾಡಿದ್ದರು, ನಾನು, ಪರಮೇಶ್ವರ್ ಇಬ್ಬರು ಒಟ್ಟಿಗೆ ಕೆಲಸ ಮಾಡಿz್ದೆÃವೆ, 12 ವರ್ಷ ಬಹಳ ಅನ್ಯೋನ್ಯವಾಗಿ ಕೆಲಸ ಮಾಡಿz್ದÉÃವೆ, ನಾನೇ ಅವರನ್ನು ಎಂಎಲ್‌ಸಿ ಮಾಡಿಕೊಂಡು ಗೃಹ ಖಾತೆಯನ್ನು ನೀಡಿz್ದÉÃ ಎಂದರು.

ಪರಮೇಶ್ವರ್ ಒಬ್ಬ ಪ್ರಾಮಾಣಿಕ, ನಿಷ್ಠಾವಂತ ಜತೆಗೆ ಬುದ್ದಿವಂತ, ನನಗಿಂತ ಬುದ್ದಿವಂತ ಅಂದರೆ ತಪ್ಪಾಗಲಾರದು. ಅದಕ್ಕೆ ಅವರನ್ನು ಪ್ರಣಾಳಿಕೆ ಸಮಿತಿ ಅಧ್ಯP್ಷÀರನ್ನಾಗಿ ಮಾಡಿz್ದÉÃವೆ ನಾಳೆಯೇ ಅದನ್ನು ಬಿಡುಗಡೆಗೊಳಿಸುತ್ತೇವೆ ಎಂದರು.

ಯಾರೋ ನಮ್ಮ ರಾಜಕೀಯ ವಿರೋಧಿಗಳು, ಕಿಡಿಗೇಡಿಗಳು ಪರಮೇಶ್ವರ್ ಮೇಲೆ ಹಲ್ಲೆ ಮಾಡಿದ್ದಾರೆ, ಸೋಲ್ತೀವಿ ಅಂತಾ ಹತಾಷೆ ಇರಬೇಕು. ಸೂರ್ಯ ಹುಟ್ಟೋದು ಎಷ್ಟು ಸತ್ಯವೋ ಅವರು ಪರಮೇಶ್ವರ್ ಗೆ¯್ಲÉÆÃದು ಅಷ್ಟೇ ಸತ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net