

ತುಮಕೂರು: ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಅವರ ವಿರುದ್ಧ 65 ಪ್ರಕರಣ ದಾಖಲಾಗಿವೆ, ಸಿಎಂ ಬೊಮ್ಮಾಯಿ ವಿರುದ್ಧ ಒಂದೂ ಕೇಸು ದಾಖಲಾಗಿಲ್ಲದಿದ್ದರೂ ಬೊಗುಳುವವರು ಬೊಗುಳುತ್ತಿರುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ನಗರದ ಸಿದ್ಧಗಂಗಾ ಮಠದಲ್ಲಿ ಸೋಮವಾರ ರಾತ್ರಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಪೇಸಿಎಂ ಅಭಿಯಾನ ನಾಚಿಗೆಗೇಡು ಎಂದರು.
ಕಾಂಗ್ರೆಸ್ನ ದೆಹಲಿಯಿಂದ ಕರ್ನಾಟಕದ ವರೆಗಿನ ನಾಯಕರೆಲ್ಲಾ ಜೈಲು ಹಾಗೂ ಬೇಲ್ ಮೂಲಕ ಹೊರಗೆ ಓಡಾಡುತ್ತಿದ್ದಾರೆ, ಅದ್ಯಾವ ಮುಖವಿಟ್ಟುಕೊಂಡು ಪೇಸಿಎಂ ಎಂದು ಪೋಸ್ಟರ್ ಅಂಟಿಸುತ್ತಿದ್ದಾರೆ ಅರ್ಥವಾಗಿಲ್ಲ ಎಂದರು.