ಭಾನುವಾರ ರಾತ್ರಿಯ ಮಳೆಯ ಆರ್ಭಟಕ್ಕೆ 22 ಮನೆ ಕುಸಿತ

GUBBI_Rain
Published on

ತುಮಕೂರು: ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಗುಬ್ಬಿ ತಾಲೂಕಿನಲ್ಲಿ ಬರೋಬ್ಬರಿ 22 ವಾಸದ ಮನೆ ಬಿದ್ದಿವೆ. ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯಲ್ಲಿ 11, ಕಡಬ 7, ಹಾಗಲವಾಡಿ 1, ಸಿ.ಎಸ್.ಪುರ 2 ಮನೆಗಳು ಬಿದ್ದಿದ್ದು ಕುಟುಂಬಗಳು ನಿರಾಶ್ರಿತವಾಗಿವೆ.

ಮನೆ ಕಳೆದುಕೊಂಡು ಸಂತ್ರಸ್ಥರಾಗಿರುವ ಕುಟುಂಬಗಳಿಗೆ ತಾಲೂಕು ಆಡಳಿತ ತಾತ್ಕಾಲಿಕ ಆಶ್ರಯ ನೀಡಿದೆ. ಜಿಲ್ಲೆಯಲ್ಲಿ ಕಳೆದೊಂದು ತಿಂಗಳಲ್ಲಿ 740ಕ್ಕೂ ಹೆಚ್ಚು ವಾಸದ ಮನೆಗಳು ಧರೆಗುರುಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net