ವಕೀಲರ ಕಣ್ಣಿಗೆ ಖಾರದಪುಡಿ ಎರಚಿ ಚಿನ್ನಾಭರಣ ದೋಚಿದ್ದ ತೃತೀಯ ಲಿಂಗಿಗಳ ಬಂಧನ

Crime Logo
Published on

ತುಮಕೂರು: ವಕೀಲರೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ, ನಗದು ಸೇರಿದಂತೆ ಚಿನ್ನಾಭರಣ ರಾಬರಿ ಮಾಡಿದ್ದ ತೃತೀಯ ಲಿಂಗಿಗಳು ಸೇರಿದಂತೆ ಐವರನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ದಾಬಸ್‌ಪೇಟೆಯ ತೃತೀಯ ಲಿಂಗಿಗಳಾದ ನವ್ಯ (37), ಅನುಶ್ರೀ (30), ಕೀರ್ತನ (22), ಸುಖ್ಯ (23) ಹಾಗೂ ಕಾರು ಚಾಲಕ ಹರ್ಷ (20) ಬಂಧಿತ ಆರೋಪಿಗಳು.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ದೊಡ್ಡಜಾಲಹಳ್ಳಿ ಮೂಲದ ವಕೀಲ ಗಣೇಶ್ ಕಾರಿನಲ್ಲಿ ಕುಣಿಗಲ್ ಬೈಪಾಸ್ ಮಾರ್ಗವಾಗಿ ಬೆಂಗಳೂರಿಗೆ ತೆರಳುವಾಗ ಗವಿಮಠ ಸೇತುವೆ ಬಳಿ ತೃತೀಯ ಲಿಂಗಿಗಳು ಅಪಘಾಗಿ, ರಸ್ತೆಯಲ್ಲಿ ಬಿದ್ದವರಂತೆ ನಾಟಿಸಿ ಸಹಾಯಕ್ಕೆ ಬಂದವರ ಕಣ್ಣಿಗೆ ಕಾರದ ಪುಡಿ ಎರಚಿ ರಾಬರಿ ಮಾಡಿದ್ದರು‌

ಒಟ್ಟು ಐದು ಲಕ್ಷ ರೂ ಬೆಲೆ ಬಾಳುವ ಚಿನ್ನ ಕಸಿದುಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net