ರಾಜ್ಯ ಕಬಡ್ಡಿ ತಂಡದಲ್ಲಿ ಗೂಳೂರು ಪ್ರತಿಭೆ

Kabaddi_State
Published on

ತುಮಕೂರು: ತಾಲೂಕು ಗೂಳೂರಿನ ಶ್ರೀ ಗಣೇಶ ಗ್ರಾಮಾಂತರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 8ನೇ ತರಗತಿ ವಿದ್ಯಾರ್ಥಿ ಎಸ್​.ಚಂದನಗೌಡ ರಾಜ್ಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಬಿಹಾರದ ರಸಲ್​ಪುರ್​ದಲ್ಲಿ ಮಾ.28 ರಿಂದ 31ರವರೆಗೆ ನಡೆಯಲಿರುವ 34ನೇ ಸಬ್​ ಜೂನಿಯರ್​ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿರುವ ಚಂದನಗೌಡ ವಡ್ಡರಹಳ್ಳಿ ಗ್ರಾಮದವರು. ಜಿಲ್ಲಾ ಅಮೆಚೂರ್​ ಕಬಡ್ಡಿ ಅಸೋಸಿಯೇಷನ್​ ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net