ಪಿಎಫ್‌ಐ ಜಿಲ್ಲಾಧ್ಯಕ್ಷ ರಿಯಾನ್‌ಖಾನ್ ಬಂಧನ

27TMK_PFI_
Published on

ತುಮಕೂರು: ಎನ್‌ಐಎ ಮಾಹಿತಿ ಆಧರಿಸಿ ರಾಜ್ಯದೆಲ್ಲೆಡೆ ಪಾಪುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಸಂಘಟನೆಯ ಕಾರ್ಯಕರ್ತರ ಮೇಲೆ ರಾಜ್ಯದೆಲ್ಲೆಡೆ ದಾಳಿ ನಡೆಸಿದ್ದು ತುಮಕೂರು ಜಿಲ್ಲಾಧ್ಯಕ್ಷ ರಿಯಾನ್‌ಖಾನ್‌ನನ್ನು ಮಂಗಳವಾರ ಬಂಧಿಸಿದ್ದಾರೆ.


ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್‌ಕುಮಾರ್ ಶಹಾಪುರವಾಡ್ ನೇತೃತ್ವದಲ್ಲಿ ಬೆಳಗ್ಗೆ 5ರ ಸಮಯದಲ್ಲಿ ರಿಯಾನ್‌ಖಾನ್ ಮನೆಯ ಮೇಲೆ ದಾಳಿ ನಡೆದ ಪೊಲೀಸರು ಆತನನ್ನು ವಶಕ್ಕೆ ಪಡೆದು ತಹಸೀಲ್ದಾರ್ ಮುಂದೆ ಹಾಜರುಪಡಿಸಿದರು.


ಮುಂದಿನ ಒಂದು ವಾರದ ಕಾಲ ನ್ಯಾಯಾಂಗ ಬಂಧನಕ್ಕೆ ರಿಯಾನ್‌ಖಾನ್ ಒಳಪಡಿಸಲಾಗಿದೆ. ಗಲಭೆ ಸೃಷ್ಟಿಸುವ ಪ್ರಯತ್ನ, ಶಾಂತಿ ಸುವ್ಯವಸ್ಥೆಗೆ ಭಂಗ ತರುವ ದೃಷ್ಟಿಯಿಂದ ಸಂಘಟಿತರಾಗುತ್ತಿರುವ, ಜನರನ್ನು ಎತ್ತಿಕಟ್ಟುತ್ತಿರುವ ಸುಳಿವಿನ ಆರೋಪದ ಮೇಲೆ ಪೊಲೀಸರು ರಿಯಾನ್‌ಖಾನ್ ಬಂಧಿಸಿದ್ದಾರೆ.


ವಿದೇಶದಿಂದ ಬ್ಯಾಂಕ್ ಖಾತೆಗೆ ಹೆಚ್ಚು ಹಣ ಬಂದಿದೆ ಎಂಬ ಹಿನ್ನೆಲೆಯಲ್ಲಿ ಅನುಮಾನದ ಮೇಲೆ ತುಮಕೂರು ತಾಲೂಕು ಬೆಳಧರದಲ್ಲಿಯೂ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

ಪಿಎಫ್‌ಐ ಜಿಲ್ಲಾಧ್ಯಕ್ಷ ರಿಯಾನ್‌ಖಾನ್‌ನನ್ನು ಬಂಧಿಸಿದ್ದು ಸಿಆರ್‌ಪಿಸಿ 107, 151 ಅಡಿಯಲ್ಲಿ ತಹಸೀಲ್ದಾರ್ ಎದುರು ಹಾಜರುಪಡಿಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವಶಕ್ಕೆ ಪಡೆಯಲಾಗಿದೆ.
ರಾಹುಲ್‌ಕುಮಾರ್ ಶಹಾಪುರವಾಡ್,
ಜಿಲ್ಲಾ ಪೊಲೀಸ್ ಅಧೀಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net