

ಪಾವಗಡ: ಪ್ರೇಮ ಪ್ರಕರಣ ಒಂದರಲ್ಲಿ ಮನೆ ಬಿಟ್ಟು ಓಡಿ ಹೋಗಿ, ಮತ್ತೆ ವಾಪಸಾಗಿದ್ದ ಜೋಡಿಯಲ್ಲಿ ಯುವಕನ ಶವ ಮೂರು ವರ್ಷದ ನಂತರ ಪತ್ತೆಯಾಗಿದೆ ಎನ್ನಲಾಗಿದ್ದು ಯುವತಿಯ ಕಡೆಯವರೇ ಕೊಲೆ ಮಾಡಿದ್ದಾರೆ ಎಂದು ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಟಿ.ಎನ್.ಪೇಟೆಯ ನಾಗೇಂದ್ರ(27) ಕೊಲೆಯಾಗಿದ್ದಾನೆ ಎಂದು ಆತನ ಮನೆಯವರು ಪಾವಗಡ ಠಾಣೆಯಲ್ಲಿ ದೂರು ನೀಡಿದ್ದು, ಅನಿಲ್‌ಕುಮಾರ್, ಸತೀಶ್, ಕಂಗುರಿ, ಶಂಕರ್ ಹಾಗೂ ಸೂರಿ ಎಂಬವವರನ್ನು ಬಂಧಿಸಲಾಗಿದೆ.
ಮೂರು ವರ್ಷದ ಹಿಂದೆ ರಾಜೀ ಪಂಚಾಯಿತಿ ನಂತರ ಯುವತಿಯನ್ನು ಅವರ ಮನೆಗೆ ಕರೆತಂದು ಬಿಟ್ಟು ಕಾಣೆಯಾಗಿದ್ದ ನಾಗೇಂದ್ರ ಕೊಲೆ ಪ್ರಕರಣ ಮೂರು ವರ್ಷದ ನಂತರ ಹೊರಬಿದ್ದಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.