

ತುಮಕೂರು: ಪಾವಗಡ ತಾಲೂಕಿನ ಬೂದಿಬೆಟ್ಟ ಗ್ರಾಪಂ ಕಟ್ಟಡವನ್ನು ಧ್ವಂಸಗೊಳಿಸಲು ಯತ್ನಿಸಿರುವ ಘಟನೆ ಗುರುವಾರ ರಾತ್ರಿ ವರದಿಯಾಗಿದೆ.
ಪಾವಗಡ ತಾಲ್ಲೂಕು ಬೂದಿಬೆಟ್ಟ ಗ್ರಾಮದ ನಡುವೆಯೇ ಇರುವ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಜಿಲೇಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟಗೊಳಿಸಲಾಗಿದ್ದು ಕಟ್ಟಡದ ಎರಡೂ ಕಡೆಯ ಗೋಡೆ ಕುಸಿದುಬಿದ್ದಿದೆ.
ಕಟ್ಟಡಲ್ಲಿ ಬೆಂಕಿ ಹೊತ್ತಿಕೊಂಡು ಪೀಠೋಪಕರಣ ಭಸ್ಮವಾಗಿದ್ದು ಹಲವು ದಾಖಲೆಗಳು ಸುಟ್ಟು ಕರಕಲಾಗಿವೆ. ವೈ.ಎಸ್.ಹೊಸಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.