

ಕೊರಟಗೆರೆ: 35 ವರ್ಷಗಳ ರಾಜಕೀಯ ಜೀವನದಲ್ಲಿ ಡಾ.ಜಿ.ಪರಮೇಶ್ವರ್ ದಲಿತರ ಪರವಾಗಿದ್ದಾರೆ, ಎಡಗೈ ಸಮುದಾಯ ಅವರ ಪರವಾಗಿರಲಿದೆ ಎಂದು ಮಾದಿಗ ಸಮುದಾಯದ ಮುಖಂಡ ವಾಲೆಚಂದ್ರಯ್ಯ ಹೇಳಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಸಮುದಾಯದ ಮುಖಂಡರ ಜತೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಜಿ.ಪರಮೇಶ್ವರ ತಮ್ಮ ರಾಜಕೀಯ ಜೀವನ ಉದ್ದಕ್ಕೂ ಎಡಗೈ ಮತ್ತು ಬಲಗೈ ಸಮುದಾಯವನ್ನು ಒಗ್ಗೊಡಿಸಿಕೊಂಡು ಬರುತ್ತಿದ್ದಾರೆ, ಒಳಮೀಸಲಾತಿ ಮತ್ತು ಸದಾಶಿವಆಯೋಗದ ಪರವಾಗಿದ್ದಾರೆ ಎಂದರು.
ಕ್ಷೇತ್ರದಲ್ಲಿ ನಮ್ಮ ಸಮುದಾಯಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದು ಎಲ್ಲಾ ಸಮುದಾಯದ ಜನರಿಗೆ ಉತ್ತಮ ಸೇವೆ ಸಲ್ಲಿಸಿ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಿ ಸಾಕಷ್ಟು ಅಭಿವೃದ್ದಿಕಾರ್ಯ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಸದಾ ಒಳಮೀಸಲಾತಿ ಮತ್ತು ಸದಾಶಿವ ಅಯೋಗದ ಪರವಿದೆ. ಆದರೆ, ಬಿಜೆಪಿ ಪಕ್ಷ ಮೊದಲಿನಿಂದಲೂ ಸಂವಿದಾನ ವಿರೋಧಿ ನೀತಿ ಮಾಡುತ್ತಾ ಇತ್ತಿಚೆಗೆ ಚುನಾವಣೆಗೋಸ್ಕರ ಮಾದಿಗ ಸಮುದಾಯದ ಕಣ್ಣು ಒರೆಸಲು ಸರ್ಕಾರ ಅವಧಿ ಮುಗಿಯುವ ಕಡೆಯ ದಿನಗಳಲ್ಲಿ ಒಳ ಮಿಸಲಾತಿ ಘೋಷಿಸಿ ನಂತರ ಅದು ಜಾರಿಗೆ ಬಂದAತೆ ಮಾಡಿ ರಾಜಕೀಯಕುತಂತ್ರ ಮಾಡಿದೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷ ಸದಾದಲಿತರ ಪರ ಇರುವ ಪಕ್ಷವಾಗಿದೆ, ಈ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಮ್ಮ ಸಮುದಾಯದ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ.ಆದರೆ ಬಿಜೆಪಿ ಕಾಟಾಚಾರಕ್ಕೆ ಸೋಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಅವರ ಉದ್ಧೇಶ ನಮ್ಮ ಸಮುದಾಯದವರು ಹೆಚ್ಚು ಜನಗೆಲ್ಲಬಾರದು ಎನ್ನುವದಾಗಿದೆ ಎಂದು ದೂರಿದರು.
ಬಿಜೆಪಿ ಅಭ್ಯರ್ಥಿ ಅನಿಲ್‌ಕುಮಾರ್ ಐಎಎಸ್ ಸೇವೆಯಲ್ಲಿದ್ದರೂ ದಲಿತ ಸಮುದಾಯಕ್ಕೆ ನೆರವಾಗಿಲ್ಲ, ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ಸಹಾಯ ಮಾಡಲಿಲ್ಲ, ಒಳಮೀಸಲಾತಿ ಜಾರಿಗೆ ಶ್ರಮ ಪಡಲಿಲ್ಲ ಹಾಗಾಗಿ, ಅವರನ್ನು ಜನರು ತಿರಸ್ಕರಿಸಬೇಕು ಎಂದರು.
ಜೆಡಿಎಸ್ ಅಭ್ಯರ್ಥಿ ಪಿ.ಆರ್.ಸುಧಾಕರಲಾಲ್ ಸಂಪೂರ್ಣ ಒಳಮೀಸಲಾತಿ ವಿರೋಧಿಯಾಗಿದ್ದು ಅವರ ಜನಾಂಗದ ಪರವಾಗಿದ್ದಾರೆ, ಈ ಭಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಅಧಿಕಾರಕ್ಕೆ ಬರಲ್ಲಿದ್ದು ಸಂಪೂರ್ಣ ಒಳಮೀಸಲಾತಿ ಜಾರಿ ಖಚಿತ ಎಂದರು.
ಮುಖAಡರಾದ ಜಟ್ಟಿ ಅಗ್ರಹಾರ ನಾಗರಾಜು, ಜಯರಾಮ್, ಸುರೇಶ್, ಏರ್‌ಟೆಲ್‌ಗೋಪಿ, ದೋಡ್ಡಯ್ಯ, ರಘುವೀರ್, ಮಿಲಿಟರಿನರಸಿಂಹಮೂರ್ತಿ, ಶಿವರಾಮಯ್ಯ, ನರಸಿಂಹಮೂರ್ತಿ, ಜಗದೀಶ್, ನಾರಾಯಣಪ್ಪ, ಸುಬ್ಬಣ್ಣ, ಲಕ್ಷೀಕಾಂತ ಮತ್ತಿತರರು ಇದ್ದರು.