

ತುಮಕೂರು: ಕಾಂಗ್ರೆಸ್ ಹಿರಿಯ ಶಾಸಕ ಡಾ.ಜಿ.ಪರಮೇಶ್ವರ ತಾವು ಸಿಎಂ ಆಗುವ ಆಸೆಯನ್ನು ಪದೇಪದೇ ಪುನರುಚ್ಚರಿಸುವ ಮೂಲಕ ಕೈ ಪಾಳಯದ ಸಿಎಂ ರೇಸ್‌ನಲ್ಲಿರುವ ಪ್ರಯತ್ನದಲ್ಲಿದ್ದಾರೆ.
ಮಧುಗಿರಿ ತಾಲೂಕು ಪುರವರ ಹೋಬಳಿ ತಗ್ಗಿಹಳ್ಳಿ ರಾಮಕೃಷ್ಣ ಆಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭದಲ್ಲಿ ಸಿಎಂ ಆಗುವ ಆಸೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ.
ಎರಡು ಸಲ ಸಿಎಂ ಆಗುವ ಅವಕಾಶದಿಂದ ವಂಚಿತನಾಗಿz್ದೆÃನೆ, ಅದೃಷ್ಟವಿದ್ದರೆ ಮುಂದಿನ ಬಾರಿ ಸಿಎಂ ಆಗುತ್ತೇನೆ, ಈ ವಿಶ್ವಾಸವಿದೆ ಎಂದು ಸ್ವಪಕ್ಷೀಯರಿಗೆ ಸಂದೇಶ ರವಾನಿಸಿದ್ದಾರೆ.
ಉತ್ತರ ಪ್ರದೇಶದ ಮಥುರಾ ಮಹಾಮಂಡಲೇಶ್ವರ ಕಾರ್ಷಿಣಿ ಶ್ರೀಗುರುಶರಣ ನಂದಜೀ ಅವರ ಸಮ್ಮುಖದಲ್ಲಿಯೇ ಪರಮೇಶ್ವರ ಮನದಾಳದ ಇಂಗಿತ ವ್ಯಕ್ತಪಡಿಸಿದ್ದು ರಾಜಕೀಯ ವಲಯದಲ್ಲಿ ವಿವಿಧ ಚರ್ಚೆಗೆ ಗ್ರಾಸವಾಗಿದೆ.