ತುಮಕೂರು ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ?

Palike
Published on

ತುಮಕೂರು: ಬಹುದಿನದಿಂದ ನೆನೆಗುದಿಗೆ ಬಿದ್ದಿದ್ದ ತುಮಕೂರು ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಹುದ್ದೆಗೆ ಮೀಸಲಾತಿ ಪ್ರಕಟವಾಗಿದ್ದು ಮತ್ತೊಮ್ಮೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಾಧ್ಯತೆ ದಟ್ಟವಾಗಿದೆ.

ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ, ಉಪಮೇಯರ್ ಸ್ಥಾನ ಬಿಸಿಎಂ(ಎ)ಗೆ ಮೀಸಲಾಗಿದ್ದು ಕಾಂಗ್ರೆಸ್, ಜೆಡಿಎಸ್, ಬಿಜೆಪಿಗೆ ಸ್ಪಷ್ಟ ಬಹುಮತವಿಲ್ಲದ ಕಾರಣಕ್ಕೆ ಎರಡು ಪಕ್ಷಗಳ ನಡುವೆ ಮೈತ್ರಿ ಅನಿವಾರ್ಯವಾಗಿದೆ.

ಪಾಲಿಕೆಯ ಒಟ್ಟು 35 ಸ್ಥಾನಗಳ ಬಲಾಬಲದಲ್ಲಿ ಬಿಜೆಪಿ-12, ಜೆಡಿಎಸ್-10, ಕಾಂಗ್ರೆಸ್-10, ಪಕ್ಷೇತರರು-03 ಸದಸ್ಯರಿದ್ದು ಸರಳ ಬಹುಮತಕ್ಕೆ 18 ಸ್ಥಾನಗಳ ಅಗತ್ಯವಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಜತೆಗೂಡಿ 20 ಸ್ಥಾನಗಳನ್ನು ಹೊಂದಿದ್ದು ಮೈತ್ರಿಗೆ ಇಬ್ಬರು ಪಕ್ಷೇತರ ಹಾಗೂ ಓರ್ವ ಎಂಎಲ್ಸಿ ಬೆಂಬಲ ಕೂಡ ಇದೆ.

ಈ ಹಿಂದಿನ ಮೈತ್ರಿಯಂತೆ ಕಾಂಗ್ರೆಸ್‌ಗೆ ಮೇಯರ್ ಸ್ಥಾನ ಒಲಿದುಬರುವ ಸಾಧ್ಯತೆಯಿದ್ದು ಪ್ರಭಾವತಿ ಅಥವಾ ರೂಪಶ್ರೀ ಪಾಲಿಕೆಗೆ ಸಾರಥಿಯಾಗುವ ಮಾತು ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net