

ತುಮಕೂರು: ತುಮಕೂರು ಮಹಾನಗರ ಪಾಲಿಕೆಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಅಧಿಕಾರವಿಡಿಯಲು ಒಂದಾಗಿದ್ದು ಕಾಂಗ್ರೆಸ್, ಜೆಡಿಎಸ್ ಮೈತ್ರಿ ಪಾಲಿಕೆ ಒಳಗಷ್ಟೇ ಸೀಮಿತವಾಗಿತ್ತು. ಚುನಾವಣೆ ಮುಗಿಸಿ ಹೊರಗೆ ಬಂದು ಪ್ರತ್ಯೇಕವಾಗಿ ಸಂಭ್ರಮಾಚರಣೆ ಮಾಡಿದ್ದು ದೋಸ್ತಿಯ ಗಟ್ಟಿತನ ತೋರಿಸಿತು.
ಕಾಂಗ್ರೆಸ್ ಸದಸ್ಯೆ ಎಂ.ಪ್ರಭಾವತಿ ಮೇಯರ್ ಆಗಿ ಹಾಗೂ ಉಪಮೇಯರ್ ಆಗಿ ಜೆಡಿಎಸ್ ಸದಸ್ಯ ಟಿ.ಕೆ.ನರಸಿಂಹಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದು ಪಾಲಿಕೆ ಹೊರಗಿದ್ದು ಕಾರ್ಯಕರ್ತರು ಮಾತ್ರ ಒಂದಾಗಿರಲಿಲ್ಲ.
ನೂತನ ಮೇಯರ್, ಉಪಮೇಯರ್‌ನ್ನು ಜೆಡಿಎಸ್‌ನ್ನ ಶಾಸಕ ಡಿ.ಸಿ.ಗೌರಿಶಂಕರ್, ಕಾಂಗ್ರೆಸ್‌ನ್ನ ಮಾಜಿ ಶಾಸಕ ಡಾ.ರಫೀಕ್‌ಅಹ್ಮದ್ ಅಭಿನಂದಿಸಿದಷ್ಟೇ, ನಂತರ ಎಲ್ಲರೂ ಪ್ರತ್ಯೇಕವಾಗಿ ಪಟಾಕಿ ಸಿಡಿಸಿ, ಮೆರವಣಿಗೆ ಮಾಡಿಕೊಂಡರು.