ಕಾಂಗ್ರೆಸ್- ಜೆಡಿಎಸ್ ಲೂಟಿಕೋರ ಪಕ್ಷಗಳು: ನರೇಂದ್ರಮೋದಿ

05Tmk_Modi_Highlights_08
Published on

ತುಮಕೂರು: ಕಳೆದ 9 ವರ್ಷಗಳಲ್ಲಿ ಗ್ರಾಮ, ರೈತರು, ಬಡವರ ಏಳಿಗೆಗೆ 7 ದಶಕಗಳಲ್ಲಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳಿಂದ ಹೆಚ್ಚು ವಿಕಾಸ ನಡೆದಿದೆ. ಕಾಂಗ್ರೆಸ್- ಜೆಡಿಎಸ್ ಲೂಟಿಕೋರ ಪಕ್ಷಗಳು. ಜನರ ಖರೀದಿ ಸಾಮರ್ಥ್ಯ ಹೆಚ್ಚಳ, ಜೀವನಮಟ್ಟ ಸುಧಾರಣೆಗೆ ಬಿಜೆಪಿ ಶ್ರಮಿಸಿದೆ ಎಂದು ನರೇಂದ್ರಮೋದಿ ವಿವರಿಸಿದರು.

ರೈತರಿಗಾಗಿ ಪಿಎಂ ಕಿಸಾನ್‌ಸಮ್ಮಾನ್ ನಿಧಿ ಮೂಲಕ ನೇರವಾಗಿ ಖಾತೆಗೆ ತಲುಪಿಸಿದ್ದೇವೆ. ಅದರಲ್ಲಿ ಲೂಟಿ ಇರಲಿಲ್ಲ. ಬಿಜೆಪಿ ಸರ್ಕಾರದ ಪ್ರಯತ್ನದಿಂದ 9 ಕೋಟಿ ಮಹಿಳೆಯರು ಸ್ವಸಹಾಯ ಗುಂಪಿಗೆ ಸೇರಲು ಸಾಧ್ಯವಾಗಿದೆ. ರೈತ ಉತ್ಪಾದಕ ಕಂಪನಿಗಳ ಸಬಲೀಕರಣದ ಮೂಲಕ ರೈತರಿಗೆ ಪ್ರಯೋಜನವಾಗುತ್ತಿದೆ ಎಂದರು.

ಅತ್ಯಂತ ಕಡಿಮೆ ದರದಲ್ಲಿ ರಸಗೊಬ್ಬರವನ್ನು ನೀಡುತ್ತಿದ್ದೇವೆ. 4 ಕೋಟಿ ಮನೆ ನಿರ್ಮಿಸಲಾಗಿದೆ. 3 ಕೋಟಿ ಮನೆಗಳನ್ನು ಗ್ರಾಮಗಳಲ್ಲಿ ನಿರ್ಮಾಣವಾಗಿವೆ. ಈ ಮನೆಗಳ ಮಾಲೀಕರ ಹಕ್ಕನ್ನು ಮಹಿಳೆಯರಿಗೆ ನೀಡಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net