ಮಹಾನಗರ ಪಾಲಿಕೆ ವ್ಯಾಪ್ತಿಗೆ 14 ಗ್ರಾಪಂಗಳು

Param_Palike
Published on

ತುಮಕೂರು: ತುಮಕೂರು ಮಹಾನಗರ ಪಾಲಿಕೆ ಭೌಗೋಳಿಕ ವಿಸ್ತರಣೆ ಮಾಡುವ ನಿಟ್ಟಿನಲ್ಲಿ 14 ಗ್ರಾಪಂಗಳನ್ನು ವಿಲೀನ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ನಗರದ ಮಹಾನಗರಪಾಲಿಕೆ ಆವರಣದಲ್ಲಿ ಶನಿವಾರ ಅಕ್ಕ ಕೆೆ, ಶಿಶುಪಾಲನಾ ಕೇಂದ್ರ, ಪಾಲಿಕೆ ಸಭಾಂಗಣ ಹಾಗೂ ಜಿಲ್ಲಾಸ್ಪತ್ರೆ ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದಿರಾ ಕ್ಯಾಂಟೀನ್​ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಂತೆ ತುಮಕೂರು ಸಹ ಬೆಳೆಯಬೇಕು. ಬಿಬಿಎಂಪಿ ಈಗ ಗ್ರೇಟರ್​ ಬೆಂಗಳೂರು ಆಗಲಿದೆ. ಅದರಂತೆ ಬೆಂಗಳೂರಿನ ಹೆಬ್ಬಾಗಿಲಾಗಿರುವ ತುಮಕೂರು ಬೆಳವಣಿಗೆಗೆ ಇನ್ನಷ್ಟು ವೇಗ ನೀಡಬೇಕಿದೆ ಎಂದರು.

ಈ ನಿಟ್ಟಿನಲ್ಲಿ ತುಮಕೂರಿನವರೆಗೂ ಮೆಟ್ರೋ ವಿಸ್ತರಣೆ ಮಾಡಬೇಕೆಂಬ ಉದ್ದೇಶದಿಂದ 2025-26ನೇ ಸಾಲಿನ ರಾಜ್ಯ ಬಜೆಟ್​ನಲ್ಲಿ ಮಾದಾವರದಿಂದ ಶಿರಾಗೇಟ್​ವರೆಗೂ ಒಟ್ಟು 52 ಕಿ.ಮೀ. ಮೆಟ್ರೋ ವಿಸ್ತರಣೆ ಮಾಡಲು ವಿಸತ ಯೋಜನೆ ವರದಿ ಸಿದ್ಧಗೊಂಡಿದೆ. ಮೆಟ್ರೋ ಮಾರ್ಗದ ನಿಮಾರ್ಣಕ್ಕಾಗಿ ಕೇಂದ್ರ ಸರ್ಕಾರದ ಅನುಮತಿ ಕೋರಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕ್ಲೀನ್​ ಸಿಟಿ, ಪರಂ ಗರಂ: ನಗರದ ಸ್ವಚ್ಛತೆಗೆ ರ್ನಿಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಸೇರಿ ಕ್ಲೀನ್​ಸಿಟಿಯನ್ನಾಗಿ ನಿರ್ಮಿಸಲು ಶ್ರಮಿಸಬೇಕು. ನಗರದಲ್ಲಿ ಗಿಡ ನೆಡುವ ಕಾರ್ಯ ಆಗಬೇಕು ಎಂದು ಪರಮೇಶ್ವರ ಹೇಳಿದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್​ ಅಧ್ಯಕ್ಷತೆವಹಿಸಿದ್ದರು. ತುಮುಲ್​ ಅಧ್ಯಕ್ಷ ಎಚ್​.ವಿ. ವೆಂಕಟೇಶ್​, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ , ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಮತ್ತಿತರರು ಉಪಸ್ಥಿತರಿದ್ದರು.

ಈ ವೇಳೆ 20 ಆಸ್ತಿ ಮಾಲೀಕರಿಗೆ ಸಾಂಕೇತಿಕವಾಗಿ ಇ -ಆಸ್ತಿ ಹಾಗೂ ಬಿ- ಖಾತಾ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net