ರಸ್ತೆ ಗುಂಡಿಗೆ ಜೀವ ಕಳೆದುಕೊಂಡ ನಿವೃತ್ತ ಶಿಕ್ಷಕ

MPK
Published on

ಮಧುಗಿರಿ: ಪಟ್ಟಣದ ರಸ್ತೆಗಳೆಲ್ಲ ಗುಂಡಿ ಬಿದ್ದು, ಜನರ ಜೀವನಕ್ಕೆ ಕಂಟಕವಾಗಿ ಪರಿಣಮಿಸಿವೆ. ವಿಪರ್ಯಾಸವೆಂದರೆ ಕಳೆದ ಒಂದು ವರ್ಷದಿಂದ ರಸ್ತೆಗಳು ಗುಂಡಿ ಬಿದ್ದಿದ್ದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಭಾನುವಾರ ರಾತ್ರಿ ನಿವೃತ್ತ ಶಿಕ್ಷಕರೊಬ್ಬರು ಗುಂಡಿಗೆ ಬಿದ್ದು ಜೀವ ತೆತ್ತ ತಕ್ಷಣ ಎಚ್ಚೆತ್ತುಕೊಂಡು ಗುಂಡಿಗೆ ತಾತ್ಕಾಲಿಕ ತೇಪೆ ಹಾಕಿ ಕೈ ತೊಳೆದುಕೊಂಡಿದ್ದಾರೆ.

ಪಟ್ಟಣದ ಪಿಡಬ್ಲ್ಯೂಡಿ ವಸತಿ ನಿಲಯದ ವಾಸಿ ನಿವೃತ್ತ ಶಿಕ್ಷಕ ಗಂಗಾಧರಪ್ಪ (63) ಗುಂಡಿಯಲ್ಲಿ ಬಿದ್ದು, ಕಳೆದುಕೊಂಡವರು.

ಇವರು ಭಾನುವಾರ ರಾತ್ರಿ ಪಟ್ಟಣದ ಲಿಂಗೇನಹಳ್ಳಿಗೆ ಹೋಗಿ ವಾಪಸ್ ಆಗುವ ಸಂದರ್ಭದಲ್ಲಿ ಲಿಂಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಂಭಾಗದ ರಸ್ತೆಯಲ್ಲಿದ್ದ ಗುಂಡಿಗೆ ದ್ವಿಚಕ್ರವಾಹನ ಹೇಳಿದ್ದು ಆಯತಪ್ಪಿ ಬಿದ್ದಿದ್ದು, ಸುಮಾರು 10 ಅಡಿ ಮುಂದಕ್ಕೆ ಚಿಮ್ಮಿದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದಾರೆ.

ರಸ್ತೆಯಲ್ಲಿ ಗುಂಡಿ ಬಿದ್ದಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರೇ ಸಣ್ಣ ಕೊಂಬೆಗಳನ್ನು ಕಿತ್ತು ಗುಂಡಿಗೆ ಅಡ್ಡಲಾಗಿ ಇಟ್ಟಿದ್ದರು ಆದರೆ ಸತತ ಮಳೆ ಬಂದ ಹಿನ್ನೆಲೆಯಲ್ಲಿ ಗಿಡಗಂಟೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು ಮಳೆಯ ನೀರು ಗುಂಡಿಯಲ್ಲಿ ನಿಂತಿದ್ದ ಹಿನ್ನೆಲೆಯಲ್ಲಿ ರಸ್ತೆಯೆಂದು ಹೋದ ಪರಿಣಾಮ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ಈ ರಸ್ತೆಯಲ್ಲಿ ನಿರಂತರ ಅಪಘಾತಗಳಾಗುತ್ತಿದ್ದು, ಬಹಳಷ್ಟು ಬಾರಿ ಮನವಿ ಸಲ್ಲಿಸಿದ್ದರು ಯಾರು ಇತ್ತ ತಿರುಗಿ ನೋಡಿರಲಿಲ್ಲ ಆದರೆ ಭಾನುವಾರ ರಾತ್ರಿ ನಿವೃತ್ತ ಶಿಕ್ಷರು ಮೃತಪಟ್ಟ ತಕ್ಷಣ ಪುರಸಭೆಯವರು ಎಚ್ಚೆತ್ತುಕೊಂಡು ಗುಂಡಿ ಮುಚ್ಚಿದ್ದಾರೆ. ಮುಂಚೆಯೇ ಈ ಕೆಲಸ ಮಾಡಿದ್ದರೆ ಜೀವ ಹೋಗುತ್ತಿರಲಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net