ಕೆ.ರಾಂಪುರ ಶಾಲೆ ಶಿಕ್ಷಕ ಚಂದ್ರಶೇಖರರೆಡ್ಡಿಗೆ ರಾಜ್ಯ ಪ್ರಶಸ್ತಿ

TR11111
Published on

ತುಮಕೂರು: ಗಡಿನಾಡು ಪಾವಗಡ ತಾಲೂಕು ಕೆ.ರಾಂಪುರ ಸರ್ಕಾರಿ ಶಾಲೆಯ ಶಿಕ್ಷಕ ಚಂದ್ರಶೇಖರರೆಡ್ಡಿ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದು ಜಿಲ್ಲೆಯ ಕೀರ್ತಿ ತಂದಿದ್ದಾರೆ.


ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕು ಸೋಂಪುರ ಸರ್ಕಾರಿ ಶಾಲೆಯಲ್ಲಿ 2007ರಲ್ಲಿ ಸೇವೆ ಆರಂಭಿಸಿದ ಚಂದ್ರಶೇಖರರೆಡ್ಡಿ ಪ್ರಸ್ತುತ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪಾವಗಡ ತಾಲೂಕು ಕೆ.ರಾಂಪುರದಲ್ಲಿ 2016ರಿಂದ ವಿದ್ಯಾರ್ಥಿ ಸ್ನೇಹಿ ಶಿಕ್ಷಕರಾಗಿ ಗುರುತಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ.


ಕೆ.ರಾಂಪುರ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಗುರುತಿಸಿಕೊಳ್ಳುವಂತೆ ಮಾಡುವಲ್ಲಿ ಶ್ರಮಿಸಿರುವ ಚಂದ್ರಶೇಖರರೆಡ್ಡಿ ಅವರಿಗೆ ಅರ್ಹವಾಗಿಯೇ ಪ್ರಶಸ್ತಿ ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net