ತುಮಕೂರು: ಅಪಘಾತಕ್ಕೊಳಗಾಗಿದ್ದ ವಾಹನವನ್ನು ನಿಯಮಾನುಸಾರ ಮಾಲೀಕರಿಗೆ ಬಿಡುಗಡೆಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಕ್ಯಾತಸಂದ್ರ ಪೊಲೀಸ್ ಠಾಣ ಎಎಸ್‌ಐ ಹಾಗೂ ಮುಖ್ಯಪೇದೆ ಲಂಚ ಸ್ವೀಕರಿಸುವಾದ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ತುಮಕೂರು ಜಿಲ್ಲಾಸ್ಪತ್ರೆ ಶಾವಾಗಾರದ ಮುಂಭಾಗ ಶುಕ್ರವಾರ ವ್ಯಕ್ತಿಯೊಬ್ಬರಿಂದ 10 ಸಾವಿ ರೂ. ಲಂಚ ಸ್ವೀಕರಿಸುತ್ತಿದ್ದ ಎಎಸ್‌ಐ ಗುರುಮಲ್ಲರಾಧ್ಯ ಹಾಗೂ 500ರೂ. ಪಡೆಯುತ್ತಿದ್ದ ನಾಗರಾಜು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದರು.
ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏ.28ರಂದು ನಡೆದ ಅಪಘಾತ ಪ್ರಕರಣದಲ್ಲಿ ಮಾಲೀಕರಿಗೆ ವಾಹನ ಬಿಡುಗಡೆ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್, ಹರೀಶ್, ಇನ್ಸ್ಪೆಕ್ಟರ್‌ಗಳಾದ ಸತ್ಯನಾರಾಯಣ ಸಲೀಂ, ರಾಮರೆಡ್ಡಿ, ಶಿವರುದ್ರಪ್ಪ ಮೇಟಿ ದಾಳಿಯಲ್ಲಿದ್ದರು.