ತುಮಕೂರಿನ ಶಿಕ್ಷಕಿ ಜಿ.ಪೊನಶಂಕರಿಗೆ ರಾಷ್ಟ್ರ ಪ್ರಶಸ್ತಿ

TR_PRASHASTI
Published on

ತುಮಕೂರು: ನಗರದ ಕೇಂದ್ರೀಯ ವಿದ್ಯಾಲಯದ ಜೀವಶಾಸ್ತ್ರ ಶಿಕ್ಷಕಿ ಜಿ.ಪೊನಶಂಕರಿ ಕೇಂದ್ರ ಸರ್ಕಾರದಿಂದ ನೀಡಲಾಗುವ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಳೆದ 27 ವರ್ಷಗಳಿಂದ ವಿಜ್ಞಾನ ಶಿಕ್ಷಕಿಯಾಗಿ ಕೇಂದ್ರೀಯ ವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜಿ.ಪೊನಶಂಕರಿ ತಮಿಳುನಾಡಿನ ಕನ್ಯಾಕುಮಾರಿಯವರು.

ಗುಜರಾತಿನ ಕಚ್ ಕೇಂದ್ರಿಯ ವಿದ್ಯಾಲಯದಲ್ಲಿ ವೃತ್ತಿ ಆರಂಭಿಸಿದ್ದ ಇವರು, ಬೆಂಗಳೂರಿನ ಐಐಎಸ್‌ಸಿ ಹಾಗೂ ಪ್ರಸ್ತುತ ತುಮಕೂರು ಕೇಂದ್ರಿಯ ವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net