ಬೋನಿಗೆ ಬಿದ್ದ ನಾಲ್ಕು ವರ್ಷದ ಗಂಡು ಚಿರತೆ

31kunigal 1
Published on

ತುಮಕೂರು: ಕುಣಿಗಲ್ ತಾಲೂಕಿನ ತಾಲೂಕಿನ ಅಮೃತೂರು ಹೋಬಳಿ ಚಿಕ್ಕರ್ಜುನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ನಾಲ್ಕು ವರ್ಷದ ಗಂಡು ಚಿರತೆ ಬಿದ್ದಿದೆ.

ಚಿಕ್ಕರ್ಜುನಹಳ್ಳಿ ಸೇರಿದಂತೆ ಇದರ ಸುತ್ತಾಮುತ್ತಲ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆ ಸಿಕ್ಕಿರುವುದು ಗ್ರಾಮಸ್ಥರಿಗೆ ತುಸು ನೆಮ್ಮದಿ ಮೂಡಿಸಿದೆ.

ಚಿಕ್ಕರ್ಜುನಹಳ್ಳಿ ಗ್ರಾಮದ ಶಾಂತಮ್ಮ ಎಂಬುವವರ ತೋಟದಲ್ಲಿ ಬೋನು ಇಟ್ಟಿದರು, ಸೆರೆ ಸಿಕ್ಕ ಚಿರತೆಯನ್ನು ಸೂಕ್ತವಾದ ಅರಣ್ಯಕ್ಕೆ ಬಿಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಮಹಮದ್ ಮನ್ಸೂರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net