ನಾಲ್ಕು ವರ್ಷದ ಮಗನ ಜತೆ ಕೆರೆಗೆ ಹಾರಿದ ತಾಯಿ; ಮಗ ಸಾವು, ತಾಯಿ ಸ್ಥಿತಿ ಚಿಂತಾಜನಕ

crime
Published on

ಕುಣಿಗಲ್: ತಾಯಿಯೊಬ್ಬರು 4 ವರ್ಷದ ಮಗು ಜತೆ ಕೆರೆ ಕೋಡಿಗೆ ಬಿದ್ದಿರುವ ಘಟನೆ ಕುಣಿಗಲ್ ತಾಲೂಕಿನ ಕೊತ್ತಗೆರೆ ಕೆರೆಯಲ್ಲಿ ಬುಧವಾರ ನಡೆದಿದ್ದು ಮಗು ಮೃತಪಟ್ಟು, ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ತುರುವೇಕೆರೆ ತಾಲೂಕು ಪುರ ಗ್ರಾಮದ ಶಿವಕುಮಾರ(4)ಮೃತ ಮಗು, ತಾಯಿ ವಿಜಯಲಕ್ಷ್ಮೀ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕುಣಿಗಲ್ ತಾಲೂಕು ಕೊತ್ತಗೆರೆ ಹೋಬಳಿ ಜಾಣಗೆರೆ ಹೊಸಹಳ್ಳಿ ಗ್ರಾಮದ ವಿಜಯಲಕ್ಷ್ಮಿ ಅವರನ್ನು ತುರುವೇಕೆರೆ ತಾಲೂಕು ಪುರ ಗ್ರಾಮದ ಲೋಕೇಶ್ ಎಂಬುವವರಿಗೆ
ವಿವಾಹ ಮಾಡಿಕೊಡಲಾಗಿತ್ತು.

ಬುಧವಾರ ಸಂಜೆ ತಾಯಿ, ಮಗು ಕೊತ್ತಗೆರೆ ಕೋಡಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಮಹಿಳೆ ಹಾಗೂ ಮಗುವನ್ನು ರಕ್ಷಿಸಲು ಯತ್ನಿಸಿದರಾದರೂ ಮಗು ಸಾವನ್ನಪ್ಪಿದೆ. ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net