

ತುಮಕೂರು: ನಡುರಸ್ತೆಯಲ್ಲಿನ ಕೆಟ್ಟು ನಿಂತಿದ್ದ ಮಿಕ್ಸರ್ ಲಾರಿಗೆ ಹಿಂಬದಿಯಿAದ ಬಂದ ದ್ವಿಚಕ್ರವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸೋಮವಾರ ನಸುಕಿನಲ್ಲಿ ನಡೆದಿದೆ.
ಕುಣಿಗಲ್ ತಾಲೂಕು ಗವಿಮಠದ ಸಮೀಪದ ಸೇತುವೆಯ ಬಳಿ ನಿಂತಿದ್ದ ಲಾರಿಗೆ ಗಿರಿಗೌಡನಪಾಳ್ಯದ ಮಹೇಶ(23) ಡಿಕ್ಕಿಯಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.