

ಕೊರಟಗೆರೆ: ಸತತ ಮಳೆಯಿಂದ ತಾಲೂಕಿನ ಕುಮಟೇನಹಳ್ಳಿಗೆ ಸಂಪರ್ಕವೇ ಕಡಿತವಾಗಿದ್ದು ಮಕ್ಕಳು, ಜನರು ಪ್ರತಿನಿತ್ಯ ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕುಮಟೇನ ಗ್ರಾಮದ ನಕಾಶೆ ರಸ್ತೆ ಇದ್ದರೂ ಇಲ್ಲದಂತೆ ಮಾಯವಾಗಿದೆ, ಸುಮಾರು ಏಳು ವರ್ಷಗಳಿಂದ ಈ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ಜೊತೆಗೆ ಮುಖ್ಯವಾಗಿ ಸಂಪರ್ಕ ರಸ್ತೆ ಇಲ್ಲದೆ ಜನರು ಹಳ್ಳವನ್ನೇ ರಸ್ತೆಯನ್ನಾಗಿ ಮಾಡಿಕೊಂಡು ಬಳಕೆ ಮಾಡುತ್ತಿದ್ದರು.
ಪ್ರಸ್ತುತ ಮಳೆ ಸುರಿದಿದ್ದ ಹಳ್ಳ ಹರಿಯಲಾರಂಭಿಸಿದ್ದು ಜನರಿಗೆ ರಸ್ತೆ ಇಲ್ಲದಂತಾಗಿದೆ, ಬೆಂಡೋಣೆ ಗ್ರಾಮದಿಂದ 1.5ಕಿಮೀ ದೂರದ ಪಕ್ಕ ರಸ್ತೆಗೆ ಜನರು ನೀರೊಳಗೆ ನಡೆದು ಸಾಗಬೇಕಿದ್ದು ಮೂಲ ಸೌಕರ್ಯಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.