

ತುಮಕೂರು: ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿಯಲ್ಲಿ ಶವಸಂಸ್ಕಾರಕ್ಕೆ ಜಾಗವಿಲ್ಲದೆ ವೃದ್ಧೆಯೊಬ್ಬರ ಮೃತದೇಹವನ್ನು ಮನೆಯ ಮುಂದೆಯೇ ಇಟ್ಟುಕೊಂಡು ಕುಳಿತಿದ್ದ ಘಟನೆ ನಡೆದಿದೆ.
ಇರಕಸಂದ್ರ ಕಾಲೋನಿಯ ವೆಂಕಟಮ್ಮ(80 ) ಭಾನುವಾರ ಬೆಳಗ್ಗೆ ವಯೋಸಹಜ ಖಾಯಿಲೆಗೆ ಮೃತಾರಗಿದ್ದು ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನವಿಲ್ಲದೆ ಅಂತ್ಯಸAಸ್ಕಾರ ಮಾಡದೆ ಸೋಮವಾರ ಸಂಜೆಯವರೆಗೂ ಮೃತದೇಹವನ್ನು ಮನೆಯ ಮುಂದೆಯೇ ಇಟ್ಟುಕೊಂಡಿದ್ದಾರೆ.
ಘಟನೆ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ತಲೆಕೆಡೆಸಿಕೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯರು ಮನಒಲಿಕೆಯ ನಂತರ ಸೋಮವಾರ ಸಂಜೆ ಕೆರೆ ಅಂಗಳದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ.