ಪರಮ್ ಎದುರೇ ಸಿದ್ದು ಸಿಎಂ ಆಗ್ಬೇಕು ಎಂದ ಕೆಎನ್‌ಆರ್!

parameshwar - kn rajanna
Published on

ತುಮಕೂರು: ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ್ ಪರವಾಗಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಸಿದ್ಧರಾಮಯ್ಯ ಅವರ ಪರವಾಗಿ ಮಧುಗಿರಿ ಅಧ್ಯಕ್ಷ ಕೆ.ಎನ್.ರಾಜಣ್ಣ ಬ್ಯಾಟ್ ಬೀಸಿದರು.

ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬುದು ನಮ್ಮ ಅಭಿಲಾಷೆ ಆದರೆ, ಸಿಎಂ ಆಯ್ಕೆಯನ್ನು ಹೈಕಮಾಂಡ್ ಮಾಡುತ್ತದೆ, ಎಂಎಲ್‌ಎ ಆಗೋದನ್ನು ಜನರು ತೀರ್ಮಾನಿಸಬೇಕು ಎಂದು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚಗೆ ಗ್ರಾಸವಾಗಿದೆ.

ಡಾ.ಜಿ.ಪರಮೇಶ್ವರ್ ಕೂಡ ಸಿಎಂ ರೇಸ್‌ನಲ್ಲಿದ್ದು ಅವರ ಕ್ಷೇತ್ರದಲ್ಲಿಯೇ ಮತ್ತೊಬ್ಬ ನಾಯಕನು ಸಿಎಂ ಆಗಲು ಪರಮೇಶ್ವರ್‌ಗೂ ಅಭಿಲಾಷೆಯಿದೆ ಎಂದು ರಾಜಣ್ಣ ನೀಡಿರುವ ಹೇಳಿಕೆ ಬಗ್ಗೆ ತರಹೇವಾರಿ ಚರ್ಚೆ ಹುಟ್ಟಿಕೊಳ್ಳಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net