ಪ್ರಧಾನಿ ಮೋದಿಗೆ ನಾನು ಬಿಸಿಲಿನಲ್ಲಿ ನಿಂತಿದ್ದು ಕಂಡಿದೆ, ನಾವು ಚರ್ಚಿಸಿದ ವಿಷಯ ಗೊತ್ತಾಗಿಲ್ಲ!?

222222222222222222
Published on

ತುಮಕೂರು: ನಾವು ಕಾಂಗ್ರೆಸ್ ರಾಷ್ಟ್ರೀಯ ಅಧಿವೇಶನದಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಆದರೆ, ಪ್ರಧಾನಿ ನರೇಂದ್ರ ಮೋದಿಗೆ ಕಂಡಿದ್ದು ನನ್ನ ತಲೆಯ ಮೇಲೆ ಕೊಡೆ ಇರಲಿಲ್ಲ ಎಂಬುದಷ್ಟೇ ಎಂದು ಇತ್ತೀಚೆಗೆ ಪ್ರಧಾನಿ ಅವರು ಪ್ರಸ್ತಾಪಿಸಿದ್ದ ವಿಷಯದ ಬಗ್ಗೆ ಖರ್ಗೆ ಭಾಷಣದಲ್ಲಿ ಪ್ರತ್ಯುತ್ತರ ಕೊಟ್ಟರು.

ತುಮಕೂರಿನಲ್ಲಿ ಎಚ್‌ಎಂಟಿ ಆರಂಭಿಸಿದ್ದು ಕಾಂಗ್ರೆಸ್, ಈಗ ಎಚ್ಎಎಲ್ ನೀಡಿದ್ದು ಯುಪಿಎ ಸರ್ಕಾರ ಆದರೆ, ನಾವು ಮಾಡಿದ್ದು ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಿದ್ದಾರೆ ಎಂದರು.

ದೇಶದಲ್ಲಿ ನರೇಂದ್ರಮೋದಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ, ಮೋದಿ, ಶಾ ಜೋಡಿ ಮಾತ್ರ ಕಾಂಗ್ರೆಸ್ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ, ಅವರ ಪ್ರಕಾರ ದೇಶಕ್ಕೆ 2014ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ, 1947ರಿಂದ ಸ್ವತಂತ್ರ್ಯ ಬಂದಿರುವ ಬಗ್ಗೆ ಅವರಿಗೆ ಅರಿವೇ ಇಲ್ಲ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net