

ತುಮಕೂರು: ಚಿತ್ರದುರ್ಗ ಮುರುಘ ಶರಣರ ವಿರುದ್ಧದ ಪೋಕ್ಸೊ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಸಂಪೂರ್ಣ ಸ್ವತಂತ್ರÈ ನೀಡಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶರಣರನ್ನು ಪೊಲೀಸರು ತಡವಾಗಿ ಬಂಧಿಸಿದ್ದಾರೆ ಎಂಬ ಎಂ.ಬಿ.ಪಾಟೀಲ ಆಕ್ಷೇಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕರಣದ ತನಿಖೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರ ಪೊಲೀಸರಿಗಿದೆ ಎಂದರು.
ತನಿಖೆ ನಡೆಯುವಾದ ಪೊಲೀಸರ ಮೇಲೆ ಟೀಕೆ ಮಾಡೋದು ಸರಿಯಲ್ಲ, ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರ ಅವರ ವಿವೇಚನೆ ಬಳಸುತ್ತಾರೆ, ಬಂಧನ ಕಡ್ಡಾಯವೇನಲ್ಲ, ಎಲ್ಲಾ ಪ್ರಕರಣದಲ್ಲಿಯೂ ಆರೋಪಿಯನ್ನು ಬಂಧಿಸಬೇಕು ಎಂದೇನಿಲ್ಲ ಎಂದರು.
ಆರೋಪ ಹೊತ್ತವರು ತನಿಖೆಗೆ ಸಹರಕರಿಸಬೇಕಷ್ಟೇ, ವಿಟ್ನೆಸ್ ಎವಿಡೆನ್ಸ್ ಇದ್ರೆ ತಕ್ಷಣ ವಶಕ್ಕೆ ಪಡೆಯುತ್ತಾರೆ, ಮರ‍್ನಾಲ್ಕು ಹಂತದಲ್ಲಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಇದಾಗದೇ ಶರಣರನ್ನು ಬಂಧಿಸಲು ಸಾಧ್ಯವಿರಲಿಲ್ಲ ಎಂದರು.
ನಾವ್ಯಾರೂ ಕಾನೂನು ಪಾಲನೆಯಲ್ಲಿ ಪೋಲಿಸರು ತಗೆದುಕೊಳ್ಳುವ ಕ್ರಮಗಳ ಬಗ್ಗೆ ಬಾಯಿ ಹಾಕೊದಿಲ್ಲ ಎಂದು ಪುನರುಚ್ಚರಿಸಿದರು.