ದೊಡ್ಡಬಳ್ಳಾಪುರ ಜನೋತ್ಸವಕ್ಕೆ ಜೆ.ಸಿ.ಮಾಧುಸ್ವಾಮಿ ಗೈರು

JCM
Published on

ತುಮಕೂರು: ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ವತಿಯಿಂದ ನಡೆಯುತ್ತಿರುವ `ಜನೋತ್ಸವ'ದಲ್ಲಿ ಹಿರಿಯ ಸಚಿವ ಜೆ.ಸಿ.ಮಾಧುಸ್ವಾಮಿ ಗೈರಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ತುಮಕೂರು ಹಾಗೂ ಮಧುಗಿರಿ ಸಂಘಟನಾ ಜಿಲ್ಲೆಯಿಂದ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರೂ ಜಿಲ್ಲೆಯ ಹಿರಿಯ ನಾಯಕರಾದ ಮಾಧುಸ್ವಾಮಿ ಗೈರು ಹಾಜರಿ ಎದ್ದು ಕಾಣಿಸಿತು.

ಸಮಾವೇಶ ನಡೆಯುವ ಸಂದರ್ಭದಲ್ಲಿ ಮಾಧುಸ್ವಾಮಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬೋರನಕಣಿವೆ ಜಲಾಶಯದಲ್ಲಿ ಬಾಗಿನ ಸಮರ್ಪಣಾ ಸಮಾರಂಭದಲ್ಲಿ ಭಾಗವಹಿಸಿದ್ದು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲಾ ಎಂಬ ಸಂದೇಹ ಸಾರ್ವಜನಿಕರಲ್ಲಿ ಮೂಡಿಸಿದೆ.

ಮಾಧುಸ್ವಾಮಿ ಹೊರತುಪಡಿಸಿ ಸಚಿವ ಬಿ.ಸಿ.ನಾಗೇಶ್ ಸಹಿತ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು ಜನೋತ್ಸವದಲ್ಲಿ ಭಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net