ಲಿಂಗಾಯಿತ ಯುವ ಮುಖಂಡರಿಗೆ ಕಾಂಗ್ರೆಸ್ ಮಣೆ; ಟೂಡಾ ಶಶಿಧರ್‌ಗೆ ಮಹತ್ವದ ಹೊಣೆ

TUDA_Shashidhar111111
Published on

ತುಮಕೂರು: ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿರುವ ಕೆಪಿಸಿಸಿ ಆರಂಭಿಸಿರುವ ವಾರ್ ರೂಂಗೆ ಜಿಲ್ಲಾ ಸಂಯೋಜಕರನ್ನಾಗಿ ತಿಪಟೂರಿನ ಟೂಡಾ ಶಶಿಧರ್ ನೇಮಕ ಮಾಡಲಾಗಿದೆ.

ಎಐಸಿಸಿ ವಿಶೇಷ ತಂಡದ ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಸಮುದಾಯಗಳಿಗೆ ಆದ್ಯತೆ ನೀಡಲು ಮುಂದಾಗಿರುವ ಕಾಂಗ್ರೆಸ್ ಆರಂಭಿಕ ಹಂತವಾಗಿ ಲಿಂಗಾಯಿತ ಸಮುದಾಯದ ಯುವ ನಾಯಕ ಸಿ.ಬಿ.ಶಶಿಧರ್‌ಗೆ ಮಹತ್ವದ ಜವಬ್ಧಾರಿ ನೀಡಿದೆ.

ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ ತ್ಯಜಿಸಿದ ನಂತರ ಕಾಂಗ್ರೆಸ್‌ಗೆ ಒಕ್ಕಲಿಗ ಮತಬ್ಯಾಂಕ್ ಸಡಿಲವಾಗಿರುವುದು ಹಾಗೂ ಜೆಡಿಎಸ್ ಕೂಡ ಒಕ್ಕಲಿಗರ ಮತಬ್ಯಾಂಕ್ ಹಿಡಿದಿಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಲಿಂಗಾಯತರಿಗೆ ಮಣೆ ಹಾಕಲು ಕಾಂಗ್ರೆಸ್ ನಿರ್ಧರಿಸಿರುವ ಮೊದಲ ಹೆಜ್ಜೆಯೇ ಸಿ.ಬಿ.ಶಶಿಧರ್ ನೇಮಕ ಎನ್ನಲಾಗಿದೆ.

ಜಿಲ್ಲಾಧ್ಯಕ್ಷ ಸ್ಥಾನ ಕೂಡ ಲಿಂಗಾಯಿತರಿಗೆ?
ಹಳೆ ಮೈಸೂರು ಭಾಗದಲ್ಲಿ ಹಾಸನ ಜಿಲ್ಲಾಧ್ಯಕ್ಷ ಮಾತ್ರ ಲಿಂಗಾಯಿತ ಸಮುದಾಯಕ್ಕೆ ಸೇರಿದವರಿದ್ದರು, ಅಲ್ಲಿಯೂ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡಿದೆ ಹಾಗಾಗಿ, ತುಮಕೂರು ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿ ಬಿಜೆಪಿ ಮತಬ್ಯಾಂಕ್ ಚದುರಿಸುವ ಮಾಸ್ಟರ್ ಪ್ಲಾನ್ ಎಐಸಿಸಿ ನೇಮಿಸಿರುವ ಟೀಂ ನೀಡಿದೆ ಎನ್ನಲಾಗಿದ್ದು ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
ಜಿಲ್ಲೆಯಲ್ಲಿ ಲಿಂಗಾಯಿತ ಸಮುದಾಯಕ್ಕೆ ಸೇರಿರುವ ಜಿಲ್ಲೆಯ ಎಲ್ಲಾ ಮುಖಂಡರ ಸ್ವವಿವರ ಕೂಡ ಈಗಾಗಲೇ ಪಡೆಯಲಾಗಿದ್ದು ಯಾರು ಜಿಲ್ಲಾಧ್ಯಕ್ಷರಾಗಲಿದ್ದಾರೆ ಎಂಬ ಕುತೂಹಲಕ್ಕೆ ಅಕ್ಟೋಬರ್ ಅಂತ್ಯದೊಳಗೆ ತೆರೆ ಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net