ಒತ್ತುವರಿ ತೆರವುಗೊಳಿಸುತ್ತಿರುವ ಹುಳಿಯಾರು ಕೆರೆ; ಮನೆ ಖಾಲಿ ಮಾಡುತ್ತಿರುವ ನಿವಾಸಿಗಳು

21HULIYAR5
Published on

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಕೆರೆ ನಾಲ್ಕು ದಶಕದ ನಂತರ ಕೋಡಿ ಹರಿಯುವ ಹಂತಕ್ಕೆ ಬಂದಿದ್ದು ಕೆರೆ ಅಂಗಳದ ಮನೆಗಳೆಲ್ಲಾ ಜಲಾವೃತವಾಗಿದ್ದು, ನಿವಾಸಿಗಳು ಮನೆ ಖಾಲಿ ಮಾಡಲಾರಂಭಿಸಿದ್ದಾರೆ.

ಹುಳಿಯಾರು ಶಂಕರಾಪುರ ಕೆರೆ ಅಂಗಳದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳಿದ್ದು ಗುಡಿಸಲು ಹಾಗೂ ತಗಡಿನ ಶೆಡ್ಡಿನ ಮನೆ ನಿರ್ಮಿಸಿಕೊಂಡಿದ್ದಾರೆ. ಬಹುತೇಕ ಅಲೆಮಾರಿಗಳೇ ಹೆಚ್ಚಿರುವ ಬಡಾವಣೆ ಸಂಫೂರ್ಣ ಜಲಾವೃತವಾಗಿದ್ದು ಕೆರೆ ಎಲ್ಲರನ್ನೂ ತೆರವುಗೊಳಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net